Friday, July 30, 2021
Homeಸಿನಿಮಾಇಂದ್ರಜಿತ್ ಲಂಕೇಶ್ ವಿರುದ್ಧ ನಟ ದರ್ಶನ್ ಗರಂ

ಇದೀಗ ಬಂದ ಸುದ್ದಿ

ಇಂದ್ರಜಿತ್ ಲಂಕೇಶ್ ವಿರುದ್ಧ ನಟ ದರ್ಶನ್ ಗರಂ

ಬೆಂಗಳೂರು: ನಟ ದರ್ಶನ್ ಹೆಸರಲ್ಲಿ 25 ಕೋಟಿ ರೂಪಾಯಿ ಸಾಲ ಪ್ರಕರಣದ ತನಿಖೆ ನಡೆಸುವಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಜೊತೆಗೆ ಮೈಸೂರಿನ ಸಂದೇಶ ಹೊಟೇಲ್​ನಲ್ಲಿ ನಟ ದರ್ಶನ್ ಕಡೆಯವರು ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ನಟ ದರ್ಶನ್​, ಇಂದ್ರಜಿತ್ ಲಂಕೇಶ್ ಅವರು ತುಂಬಾ ದೊಡ್ಡ ಇನ್ವೆಸ್ಟಿಗೇಟರ್ ಅಂತ ಕಿಡಿಕಾರಿದ್ದಾರೆ. ನಾನು ಸಂದೇಶ್ ಸಾವಿರ ಸಲ ಗಲಾಟೆ ಮಾಡಿಕೊಂಡಿದ್ದೇವೆ. ಇಂದ್ರಜಿತ್ ಲಂಕೇಶ್ ತಮ್ಮ ಯುಟ್ಯೂಬ್ ಚಾನಲ್​ಗೆ ಸಂದರ್ಶನ ಕೇಳಿದ್ದರು. ಆಗ ಸ್ವತಃ ಇಂದ್ರಜಿತ್ ಲಂಕೇಶ್, ಇರಲಿ ಬಿಡಿ ಸರ್​. ನೀವು ಯಾವುದೋ ಟೆಕ್ಷನ್​ನಲ್ಲಿರುತ್ತೀರಾ, ಆಗ ಬಂದು ನಿಮಗೆ ಹಿಂಸೆ ಮಾಡಿರುತ್ತಾರೆ. ಅದಕ್ಕೆ ನೀವು ರಿಯಾಕ್ಟ್​ ಮಾಡಿರುತ್ತೀರಾ ಎಂದಿದ್ದರು. ಯಾವುದೇ ಊಹಾಪೋಹಗಳನ್ನ ನಂಬಬೇಡಿ ಎಂದು ಹೇಳಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img