Friday, July 23, 2021
Homeಸುದ್ದಿ ಜಾಲಗರ್ಭಿಣಿಯರಿಗೆ ಝಿಕಾ ಸೋಂಕು ತಗುಲಿದರೆ ಮಗುವಿಗೆ ಅಪಾಯ

ಇದೀಗ ಬಂದ ಸುದ್ದಿ

ಗರ್ಭಿಣಿಯರಿಗೆ ಝಿಕಾ ಸೋಂಕು ತಗುಲಿದರೆ ಮಗುವಿಗೆ ಅಪಾಯ

ಮಂಗಳೂರು: ಗರ್ಭಿಣಿಯರಿಗೆ ಝಿಕಾ ಸೋಂಕು ತಗುಲಿದರೆ ಹುಟ್ಟುವ ಮಗುವಿನ ಮೇಲೆ ಅದು ಪರಿಣಾಮ ಬೀರಲಿದೆ, ಆದ್ದರಿಂದ ಮುನ್ನೆಚ್ಚರಿಕೆ ಅಗತ್ಯ ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಹೇಳಿದ್ದಾರೆ.

ಗರ್ಭಿಣಿಯರಿಗೆ ಝಿಕಾ ಸೋಂಕು ‌ತಗುಲಿದರೆ, ಹುಟ್ಟುವ ಮಗುವಿಗೆ ಮೈಕ್ರೋ ಸಫಾಲಿ ಎಂಬ ಅಂಗವೈಕಲ್ಯತೆ, ಮೆದುಳಿನ ಭಾಗದ ಬೆಳವಣಿಗೆ ಸಮಸ್ಯೆ ಎದುರಾಗಬಹುದು. ಆದ್ದರಿಂದ ಸಾಕಷ್ಟು ಎಚ್ಚರಿಕೆ ಅಗತ್ಯ. ಮುಖ್ಯವಾಗಿ ಗರ್ಭಿಣಿಯರಿಗೆ ಈಗಾಗಲೇ ಎನಾಮಲಿ ಸ್ಕ್ಯಾನಿಂಗ್ ಮಾಡಲಾಗುತ್ತದೆ. ‌ಈ ರೀತಿ ಮಾಡುವುದರಿಂದ ಭ್ರೂಣದಲ್ಲಿ ಅಂಗವೈಕಲ್ಯತೆ ಕಂಡು ಬಂದಲ್ಲಿ ಝಿಕಾ ವೈರಸ್ ಪತ್ತೆಹಚ್ಚಲು‌ ಸಾಧ್ಯ ಎಂದರು.

ಝಿಕಾ ವೈರಸ್ ಪತ್ತೆಗಾಗಿ ಶಂಕಿತರ ರಕ್ತದ ಮಾದರಿಯನ್ನು ಬೆಂಗಳೂರಿನ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗುತ್ತದೆ. ಯಾರಲ್ಲಾದರೂ ಏಕಾಏಕಿ ನರ ಸಂಬಂಧಿತ ಸೋಂಕು, ನಿಸ್ತೇಜವಾಗುವ ಸಮಸ್ಯೆಗಳು ಕಂಡು ಬಂದರೆ, ಆಗಲೂ ಝಿಕಾ ವೈರಸ್ ಬಗ್ಗೆ ಸಂಶಯಿತರಾಗಬಹುದು ಎಂದು ಡಿಹೆಚ್​ಒ ಹೇಳಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img