Friday, July 30, 2021
Homeಜಿಲ್ಲೆಬೆಂಗಳೂರುರಾಜ್ಯದಲ್ಲಿ ಜುಲೈ 19 ರ ನಂತರ ಅನ್ ಲಾಕ್ 4.0 ಜಾರಿ

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ ಜುಲೈ 19 ರ ನಂತರ ಅನ್ ಲಾಕ್ 4.0 ಜಾರಿ

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 19 ರ ನಂತರ ರಾಜ್ಯ ಸರಕಾರ ಸಂಪೂರ್ಣವಾಗಿ ಅನ್‌ಲಾಕ್‌ ತೆರವು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜ್ಯ ಸರ್ಕಾರವು ಈಗಾಗಲೇ ಅನ್ ಲಾಕ್ 3.0 ಜಾರಿ ಮಾಡಿದ್ದು, ಬಸ್‌ , ಮೆಟ್ರೋ, ಮಾಲ್‌, ಬಾರ್‌, ಹೋಟೆಲ್‌, ರೆಸ್ಟೋರೆಂಟ್‌, ಖಾಸಗಿ ಕಚೇರಿ, ಧಾರ್ಮಿಕ ಸ್ಥಳಗಳು ಸೇರಿದಂತೆ ಹಲವು ವಲಯಗಳಿಗೆ ಅವಕಾಶವನ್ನು ನೀಡಲಾಗಿದೆ. ಆದ್ರೆ ಚಿತ್ರಮಂದಿರಗಳಿಗೆ ಅವಕಾಶ ದೊರಕಿಲ್ಲ. ಹೀಗಾಗಿ ಮುಂದಿನ ಅನ್‌ಲಾಕ್‌ ನಲ್ಲಿ ಚಿತ್ರಮಂದಿರಗಳು ತೆರೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಇನ್ನು ರಾಜ್ಯದಲ್ಲಿ ಪ್ರಸ್ತುತ ರಾತ್ರಿ 9 ಗಂಟೆಯಿಂದ ನೈಟ್‌ ಕರ್ಪ್ಯೂ ಜಾರಿಯಲ್ಲಿದ್ದು, ಜುಲೈ 19 ರ ನಂತರ ನೈಟ್‌ಕರ್ಪ್ಯೂ ಗೆ ಸಂಪೂರ್ಣ ಬ್ರೇಕ್‌ ಹಾಕುವ ಸಾಧ್ಯತೆಯಿದೆ. ಜುಲೈ ಅಂತ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತಂತೆ ರಾಜ್ಯ ಸರ್ಕಾರ ತಜ್ಞರೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img