Friday, July 30, 2021
Homeಸುದ್ದಿ ಜಾಲಸೌರವ್ ಗಂಗೂಲಿ ಜೀವನಾಧರಿತ ಚಿತ್ರಕ್ಕೆ ಗ್ರೀನ್ ಸಿಗ್ನಲ್

ಇದೀಗ ಬಂದ ಸುದ್ದಿ

ಸೌರವ್ ಗಂಗೂಲಿ ಜೀವನಾಧರಿತ ಚಿತ್ರಕ್ಕೆ ಗ್ರೀನ್ ಸಿಗ್ನಲ್

ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಕ್ರಿಕೆಟಿಗರಾಗಿ ಅದ್ಭುತ ಸಾಧನೆ ಮಾಡಿದ್ದಾರೆ, ಇವರ ಕ್ರಿಕೆಟ್ ಜೀವನದಿಂದ ಪ್ರೇರಿತರಾಗಿ ಜೀವನಚರಿತ್ರೆ ತಯಾರು ಮಾಡಲು ಬಾಲಿವುಡ್ ತಯಾರಿ ನಡೆಸಿದ್ದು, ಅದಕ್ಕೆ ಸೌರವ್ ಗಂಗೂಲಿ ಸಹ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅದಕ್ಕೆ ನಾಯಕ ನಟನು ಆಯ್ಕೆಯಾಗಿರುವುದಾಗಿ ವರದಿಯಾಗಿದೆ.

ಸೌರವ್ ಗಂಗೂಲಿ ಅವರು ತಮ್ಮ ಜೀವನದಿಂದ ಪ್ರೇರಿತವಾದ ದೊಡ್ಡ ಬಾಲಿವುಡ್ ಚಿತ್ರವೊಂದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಸ್ವತಃ ದಾದಾ ದೃಢಪಡಿಸಿದರು. ಮಾಜಿ ಕ್ರಿಕೆಟಿಗ ಗಂಗೂಲಿ ಪಾತ್ರದಲ್ಲಿ ರಣಬೀರ್ ಕಪೂರ್ ನಟಿಸಲು ಶಿಫಾರಸು ಮಾಡಿದ್ದಾರೆ ಎಂದು ವರದಿಯಾಗಿದೆ, ಆದರೆ ಈ ಪಟ್ಟಿಯಲ್ಲಿ ಇನ್ನೂ ಇಬ್ಬರು ನಟರು ಇದ್ದಾರೆ ಎಂದು ಸಹ ಹೇಳಲಾಗುತ್ತಿದೆ.

ಈ ಹಿಂದೆ ಎಂ.ಎಸ್.ಧೋನಿ ಅವರ ಬಾಲಿವುಡ್ ಜೀವನಚರಿತ್ರೆ ಭಾರಿ ಯಶಸ್ಸನ್ನು ಕಂಡಿದ್ದು, ಸುಶಾಂತ್ ಸಿಂಗ್ ರಜಪೂತ್ ಶೀರ್ಷಿಕೆ ಪಾತ್ರವನ್ನು ಮಾಡಿದ್ದರು, ಇಮ್ರಾನ್ ಹಶ್ಮಿ ಅಭಿನಯದ ‘ಅಝರ್’ ಭಾರತದ ಮಾಜಿ ಕ್ರಿಕೆಟ್ ತಂಡದ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ಜೀವನಚರಿತ್ರೆಯಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img