Sunday, August 1, 2021
Homeಸುದ್ದಿ ಜಾಲಬಿಗ್​ ಬಿ ಬೀಟ್​ಗೆ ಕುಣಿದು ಕುಪ್ಪಳಿಸಿದ ರಶ್ಮಿಕಾ ಮಂದಣ್ಣ!

ಇದೀಗ ಬಂದ ಸುದ್ದಿ

ಬಿಗ್​ ಬಿ ಬೀಟ್​ಗೆ ಕುಣಿದು ಕುಪ್ಪಳಿಸಿದ ರಶ್ಮಿಕಾ ಮಂದಣ್ಣ!

ನ್ಯಾಷನಲ್​ ಕ್ರಷ್​ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ ಸಿನಿಮಾ ಒಂದರಲ್ಲಿ ಅಭಿನಯಿಸುತ್ತಿದ್ದಾರೆ. ಬಾಲಿವುಡ್​ ಬಿಗ್​ ಬಿ ಅಮಿತಾಬ್ ಬಚ್ಚನ್ ಜೊತೆಗೆ ‘ಗುಡ್ ಬೈ’ ಚಿತ್ರದಲ್ಲಿ ಬಣ್ಣ ಹಚ್ಚಿರುವ ರಶ್ಮಿಕಾ ಅವರ ಒಂದಷ್ಟು ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿವೆ.

ಕಾಸ್ ಭಾಲ್ ಆ್ಯಕ್ಷನ್​-ಕಟ್​ ಹೇಳಿರುವ ‘ಗುಡ್ ಬೈ’ ಚಿತ್ರದ ಮೊದಲ ಶೆಡ್ಯೂಲ್‌ನ ಚಿತ್ರೀಕರಣ ಮುಕ್ತಾಯಗೊಂಡಿದೆ. ಈ ಹಿನ್ನೆಲೆ ಚಿತ್ರತಂಡ ವಿಶೇಷ ಪಾರ್ಟಿಯೊಂದನ್ನು ಆಯೋಜಿಸಿತ್ತು. ಅಮಿತಾಬ್ ಬಚ್ಚನ್,ರಶ್ಮಿಕಾ ಮಂದಣ್ಣ, ಎಲ್ಲಿ ಅವ್ರಾಮ್, ನೀನಾ ಗುಪ್ತಾ, ಪಾವೈಲ್​ ಗುಲಾಟಿ ಸೇರಿದಂತೆ ಇಡೀ ಚಿತ್ರತಂಡ ಪಾಲ್ಗೊಂಡಿತ್ತು.

ಈ ಪಾರ್ಟಿಯ ವಿಶೇಷ ಅಂದರೆ ಅಮಿತಾಬ್​ ಅವರ ಡಿಜೆ(DJ). ಈ ಸಂತೋಷ್‌ ಕೂಟದಲ್ಲಿ ಬಿಗ್​ ಬಿ ಡಿಜೆಗೆ ಇಡೀ ಚಿತ್ರ ತಂಡ ಕುಣಿದು ಕುಪ್ಪಳಿಸಿದೆ. ಪಾರ್ಟಿಯಲ್ಲಿ ಹಾಡುಗಳಿಗೆ ನಟಿ ರಶ್ಮಿಕಾ ಮಂದಣ್ಣ ಸಹ ಹೆಜ್ಜೆ ಹಾಕಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img