Friday, July 23, 2021
Homeಸುದ್ದಿ ಜಾಲಪೊಲೀಸ್​ ಇಲಾಖೆಯ ಅಧಿಕೃತ ವೆಬ್‌ಸೈಟ್ ಹ್ಯಾಕ್​​!

ಇದೀಗ ಬಂದ ಸುದ್ದಿ

ಪೊಲೀಸ್​ ಇಲಾಖೆಯ ಅಧಿಕೃತ ವೆಬ್‌ಸೈಟ್ ಹ್ಯಾಕ್​​!

ಇಂದೋರ್(ಮಧ್ಯ ಪ್ರದೇಶ): ಬಾಂಬ್ ಬೆದರಿಕೆಯ ಕರೆ ಬಂದ ಬಳಿಕ ಇಲ್ಲಿನ ಭದ್ರತಾ ಪಡೆ ಟೈಟ್​ ಸೆಕ್ಯುರಿಟಿ ಕೈಗೊಂಡಿದೆ. ಆದರೆ ಈ ಮಧ್ಯೆ ಇಂದೋರ್ ಪೊಲೀಸರ ಅಧಿಕೃತ ವೆಬ್‌ಸೈಟ್ ಅನ್ನು ಮಂಗಳವಾರ ಹ್ಯಾಕ್ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆಕ್ಷೇಪಾರ್ಹ ಸಂದೇಶಗಳನ್ನು ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

“ಅಪರಿಚಿತ ವ್ಯಕ್ತಿಯೊಬ್ಬ ಇಂದೋರ್ ಪೊಲೀಸ್ ವೆಬ್‌ಸೈಟ್​ನ್ನು ಹ್ಯಾಕ್ ಮಾಡಿದ್ದಾನೆ. ಅದನ್ನು ತಕ್ಷಣವೇ ನಿರ್ಬಂಧಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚುತ್ತೇವೆ” ಎಂದು ಇಂದೋರ್‌ನ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿಪಿ) ಹರಿನಾರಾಯಂಚಾರಿ ಮಿಶ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬಾಂಬ್ ಬೆದರಿಕೆ ಬಗ್ಗೆ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಜಾಗರೂಕತೆಯಿಂದಿರುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಮಫ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಈ ತಂಡದಲ್ಲಿ ಬಾಂಬ್ ನಿಷ್ಕ್ರಿಯ ದಳವೂ ಸೇರಿದೆ ಎಂದು ಮಿಶ್ರಾ ಹೇಳಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img