Friday, July 30, 2021
Homeಸುದ್ದಿ ಜಾಲಪಾಕ್‌ ಬಸ್ ಸ್ಫೋಟ: ಭಯೋತ್ಪಾದಕ ದಾಳಿ ಎಂದ ಚೀನಾ

ಇದೀಗ ಬಂದ ಸುದ್ದಿ

ಪಾಕ್‌ ಬಸ್ ಸ್ಫೋಟ: ಭಯೋತ್ಪಾದಕ ದಾಳಿ ಎಂದ ಚೀನಾ

ಪೇಶಾವರ(ಪಾಕಿಸ್ತಾನ): ಭೀಕರಸ್ಫೋಟವೊಂದು ಸಂಭವಿಸಿ, ಚೀನಾದ 9 ಪ್ರಜೆಗಳೂ ಸೇರಿದಂತೆ ಒಟ್ಟು 13 ಮಂದಿ ಸಾವನ್ನಪ್ಪಿರುವ ಘಟನೆ ಈಶಾನ್ಯ ಪಾಕಿಸ್ತಾನದಲ್ಲಿ ನಡೆದಿದೆ.

ಸ್ಫೋಟದ ತೀವ್ರತೆಗೆ ಬಸ್ ನಾಲೆಯೊಳಗೆ ಉರುಳಿ ಬಿದ್ದಿದೆ. ಚೀನಿ ಪ್ರಜೆಗಳನ್ನು ಗುರಿಯಾಗಿಸಿ ಬಸ್​​ನಲ್ಲಿ ಸ್ಫೋಟಕ ಇರಿಸಲಾಗಿತ್ತೇ? ಅಥವಾ ರಸ್ತೆಯ ಬದಿಯಲ್ಲಿ ಸ್ಪೋಟಕ ಇರಿಸಲಾಗಿತ್ತೆ ಅನ್ನೋದು ಇನ್ನೂ ತಿಳಿದುಬಂದಿಲ್ಲ.

ಇಸ್ಲಾಮಾಬಾದ್​ನಲ್ಲಿರುವ ಚೀನಾ ರಾಯಭಾರ ಕಚೇರಿ, ಇದೊಂದು ಭಯೋತ್ಪಾದಕ ದಾಳಿ ಎಂದು ಹೇಳಿದೆ. ಚೀನಾ ಮೂಲದ ಕಂಪನಿಯೊಂದರ ಪ್ರಾಜೆಕ್ಟ್​​ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಸಾವನ್ನಪ್ಪಿದ್ದಾರೆಂದು ರಾಯಭಾರ ಕಚೇರಿ ಹೇಳಿದೆ.

ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಝಾವೋ ಲೈಜಿನ್, ದಾಳಿಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪಾಕಿಸ್ತಾನದ ಚೀನಾ ಪ್ರಜೆಗಳನ್ನು ಮತ್ತು ಚೀನಾ ಉದ್ಯಮಗಳನ್ನು ರಕ್ಷಿಸಬೇಕೆಂದು ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img