Friday, July 23, 2021
Homeಸುದ್ದಿ ಜಾಲಜೂ.15ರಿಂದ ದ್ವಿತೀಯ PUC ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಆರಂಭ

ಇದೀಗ ಬಂದ ಸುದ್ದಿ

ಜೂ.15ರಿಂದ ದ್ವಿತೀಯ PUC ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಆರಂಭ

ಬೆಂಗಳೂರು : ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ದ್ವಿತೀಯ ಪಿಯು ಪರೀಕ್ಷೆಯನ್ನು ರದ್ದು ಪಡಿಸಲಾಗಿದೆ. ಜೊತೆಗೆ ಪ್ರಥಮ ಪಿಯು ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡಲಾಗಿದೆ. ಹೀಗೆ ಪ್ರಥಮ ಪಿಯುಸಿಯಿಂದ ಪರೀಕ್ಷೆಯಿಲ್ಲದೇ ಪಾಸ್ ಆಗಿರುವಂತ ವಿದ್ಯಾರ್ಥಿಗಳಿಗೆ ಜುಲೈ.15, 2021ರಿಂದ ಆನ್ ಲೈನ್ ತರಗತಿಯ ಮೂಲಕ, ಶೈಕ್ಷಣಿಕ ಚಟುವಟಿಕೆಯನ್ನು ಮುನ್ನಡೆಸಲು, ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ದ್ವಿತೀಯ ಪಿಯುಸಿ ಶೈಕ್ಷಣಿಕ ವರ್ಷವು ಜುಲೈ 15, 2021ರಿಂದ ಆರಂಭವಾಗಲಿದೆ. ಹೀಗೆ ಆರಂಭವಾಗುತ್ತಿರುವಂತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗೆ ತೊಂದರೆ ಉಂಟಾಗದಂತೆ ಆನ್ ಲೈನ್ ತರಗತಿಗಳ ಮೂಲಕ, ಶಿಕ್ಷಣ ಮುಂದುವರೆಯಲಿದೆ ಎಂದು ತಿಳಿಸಿದೆ.

ಇನ್ನೂ ಮುಂದುವರೆದು ಜುಲೈ.15ರಿಂದ ಆರಂಭವಾಗುತ್ತಿರುವಂತ ದ್ವಿತೀಯ ಪಿಯುಸಿ ಶೈಕ್ಷಣಿಕ ವರ್ಷದಲ್ಲಿ, ಆಯಾ ಕಾಲೇಜು ಉಪನ್ಯಾಸಕರು ಆನ್ ಲೈನ್ ಮೂಲಕ ಪಾಠವನ್ನು ಮಾಡಬೇಕು. ಜೊತೆಗೆ ಆನ್ ಲೈನ್ ತರಗತಿಗೆ ಹಾಜರಾದಂತ ವಿದ್ಯಾರ್ಥಿಗಳ ಹಾಜರಾತಿಯನ್ನು ತೆಗೆದುಕೊಳ್ಳಬೇಕು. ಈ ಮಾಹಿತಿಯನ್ನು ಕಾಲೇಜು ಪ್ರಾಂಶುಪಾಲರಿಗೆ ಪ್ರತಿದಿನ ನೀಡಬೇಕು. ಒಂದು ವೇಳೆ ಉಪನ್ಯಾಸಕರು ಇಲ್ಲದೇ, ವಿದ್ಯಾರ್ಥಿಗಳು ಕಾಲೇಜುಗಳಿಗೆ ದಾಖಲಾಗಿದ್ದರೇ, ಸಮೀಪದ ಕಾಲೇಜಿನ ಉಪನ್ಯಾಸಕರಿಗೆ ಸೂಚಿಸಿ, ಆ ವಿದ್ಯಾರ್ಥಿಗಳಿಗೂ ಆನ್ ಲೈನ್ ಕ್ಲಾಸ್ ಮುಂದುವರೆಸುವಂತೆ ತಿಳಿಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img