Thursday, July 29, 2021
Homeಜಿಲ್ಲೆಬೆಂಗಳೂರುವಂಚನೆ ಪ್ರಕರಣಕ್ಕಿಲ್ಲ ರಾಜಿ ಸಂಧಾನ: ನಿರ್ಮಾಪಕ ಉಮಾಪತಿ ಹೇಳಿಕೆ

ಇದೀಗ ಬಂದ ಸುದ್ದಿ

ವಂಚನೆ ಪ್ರಕರಣಕ್ಕಿಲ್ಲ ರಾಜಿ ಸಂಧಾನ: ನಿರ್ಮಾಪಕ ಉಮಾಪತಿ ಹೇಳಿಕೆ

ಬೆಂಗಳೂರು: ನಟ ದರ್ಶನ್ ಹೆಸರಲ್ಲಿ 25 ಕೋಟಿ ರೂ. ವಂಚನೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ನೇಹಿತರಲ್ಲಿ ಇದ್ದ ಗೊಂದಲಗಳನ್ನು ಬಗೆಹರಿಸಿಕೊಂಡಿದ್ದೇವೆ. ಆದರೆ ವಂಚನೆ ಪ್ರಕರಣದ ತನಿಖೆ ಮುಂದುವರೆಯಲಿದೆ ಎಂದು ನಿರ್ಮಾಪಕ ಉಮಾಪತಿ ತಿಳಿಸಿದ್ದಾರೆ.

ಕುಟುಂಬ ಸಮೇತ ಬನಶಂಕರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಉಮಾಪತಿ, ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳಲ್ಲ. ನಮ್ಮ ನಿರ್ಮಾಪಕರನ್ನು ಬಿಟ್ಟುಕೊಡಲ್ಲ ಎಂದು ದರ್ಶನ್ ಸರ್ ಕೂಡ ಹೇಳಿದ್ದಾರೆ. ಸ್ನೇಹಿತರ ನಡುವಿನ ಗೊಂದಲ ಬಗೆಹರಿದಿದೆ. ಹಾಗಂತ ವಂಚನೆ ಪ್ರಕರಣ ಮುಕ್ತಾಯವಾಗಿದೆ ಎಂದಲ್ಲ. ಕಾನೂನು ಮೂಲಕ ಮುಂದುವರೆಯುತ್ತೇವೆ ಎಂದರು.

ನಾನು ದರ್ಶನ್ ಬಗ್ಗೆ ಆರೋಪ ಮಾಡಿಲ್ಲ, ಅವರೂ ನನ್ನ ವಿರುದ್ಧ ಆರೋಪ ಮಾಡಿಲ್ಲ ನಿನ್ನೆ ದರ್ಶನ್ ಭೇಟಿಯಾಗಿ ಮಾತುಕತೆ ನಡೆಸಿದ್ದು, ಗೊಂದಲಗಳನ್ನು ಬಗೆಹರಿಸಿಕೊಂಡಿದ್ದೇವೆ ಎಂದು ಹೇಳಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img