Sunday, August 1, 2021
Homeಸುದ್ದಿ ಜಾಲಹುಟ್ಟುಹಬ್ಬದ ಸಂಭ್ರಮದಲ್ಲಿ ಮಂಡ್ಯ ರಮೇಶ್

ಇದೀಗ ಬಂದ ಸುದ್ದಿ

ಹುಟ್ಟುಹಬ್ಬದ ಸಂಭ್ರಮದಲ್ಲಿ ಮಂಡ್ಯ ರಮೇಶ್

ಹಾಸ್ಯ ಕಲಾವಿದ ಮಂಡ್ಯ ರಮೇಶ್ ಇಂದು ತಮ್ಮ 57ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಂಡ್ಯ ರಮೇಶ್ 1996ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ‘ಜನುಮದ ಜೋಡಿ’ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದರು. ಸಿನಿಮಾ ಮಾತ್ರವಲ್ಲದೆ ಕೆಲವು ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಇತ್ತೀಚೆಗೆ ‘ಇವಳು ಸುಜಾತಾ’ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.

1997ರಲ್ಲಿ ತೆರೆಕಂಡ ‘ನಾಗಮಂಡಲ’ ಚಿತ್ರದಲ್ಲಿ ಅಭಿನಯಿಸಿದ ಇವರಿಗೆ ಬೆಸ್ಟ್ ಸಪೋರ್ಟಿಂಗ್ ಆಯಕ್ಟರ್ ರಾಜ್ಯ ಪ್ರಶಸ್ತಿ ದೊರೆಯಿತು, ಮಂಡ್ಯ ರಮೇಶ್ ಇತ್ತೀಚೆಗೆ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು ಹಲವಾರು ಸಿನಿಮಾ ಕಲಾವಿದರಿಂದ ಮಂಡ್ಯ ರಮೇಶ್ ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿವೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img