Sunday, August 1, 2021
Homeಜಿಲ್ಲೆಮಂಡ್ಯKRS​ ಅಣೆಕಟ್ಟಿಗೆ ಇಂದು ಸಂಸದೆ ಸುಮಲತಾ ಭೇಟಿ

ಇದೀಗ ಬಂದ ಸುದ್ದಿ

KRS​ ಅಣೆಕಟ್ಟಿಗೆ ಇಂದು ಸಂಸದೆ ಸುಮಲತಾ ಭೇಟಿ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಕಳೆದೊಂದು ವಾರದಿಂದ ಗಣಿಗಾರಿಕೆ ಧೂಳಿನ ಸದ್ದು ಜೋರಾಗಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಂಸದೆ ಸುಮಲತಾ ಅಂಬರೀಶ್, ಇಂದು ಬೇಬಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಇನ್ನೊಂದೆಡೆ ಸುಮಲತಾ ಭೇಟಿ ಸ್ವಾಗತಿಸಿರುವ ಶಾಸಕ ಪುಟ್ಟರಾಜು ತನಗೂ ಆಹ್ವಾನ ನೀಡಿದ್ರೆ ಬರುವುದಾಗಿ ತಿಳಿಸಿದ್ದಾರೆ.

ಕೆಆರ್​ಎಸ್ ಡ್ಯಾಂ ಬಿರುಕುಗೊಂಡಿರುವ ಹೇಳಿಕೆ ವಿಚಾರವಾಗಿ ಶುರುವಾಗಿರುವ ಸಂಸದೆ ಸುಮಲತಾ ಹಾಗೂ ದಳಪತಿಗಳ ವಾಕ್ಸಮರ ಸ್ವಲ್ಪ ತಣ್ಣಗಾಗಿದೆಯಾದರೂ ಕಲ್ಲು ಗಣಿಗಾರಿಕೆ ವಿಚಾರ ಮಾತ್ರ ಸುದ್ದು ಮಾಡುತ್ತಿದೆ. ಜುಲೈ 7 ರಂದು ಸುಮಲತಾ ಅಂಬರೀಶ್ ಕೈಗೊಂಡಿದ್ದ ಅಕ್ರಮ ಗಣಿ ಪ್ರದೇಶ ಪರಿಶೀಲನೆ ಅರ್ಧಕ್ಕೆ ಮೊಟಕುಗೊಂಡಿತ್ತು. ಮತ್ತೆ ಗಣಿ ಪ್ರದೇಶಕ್ಕೆ ಭೇಟಿ ನೀಡುವ ಡೇಟ್ ಫಿಕ್ಸ್ ಮಾಡಿಕೊಂಡಿರುವ ಸಂಸದೆ, ಇಂದು ಬೇಬಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ.

ಕೆಆರ್​​ಎಸ್​ ಡ್ಯಾಂನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳಲು ಮುಂದಾಗಿರುವ ಸಂಸದೆ, ತದನಂತರ ಬೇಬಿ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img