Sunday, August 1, 2021
Homeಸುದ್ದಿ ಜಾಲವರದಕ್ಷಿಣೆ ವಿರುದ್ಧ ರಾಜ್ಯಪಾಲರಿಂದ ಉಪವಾಸ ಸತ್ಯಾಗ್ರಹ

ಇದೀಗ ಬಂದ ಸುದ್ದಿ

ವರದಕ್ಷಿಣೆ ವಿರುದ್ಧ ರಾಜ್ಯಪಾಲರಿಂದ ಉಪವಾಸ ಸತ್ಯಾಗ್ರಹ

ತಿರುವನಂತಪುರ(ಕೇರಳ):ವರದಕ್ಷಿಣೆ ಪಿಡುಗಿನ ವಿರುದ್ಧ ರಾಜ್ಯವೊಂದರ ರಾಜ್ಯಪಾಲರೇ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಇಂತಹದ್ದೊಂದು ಅಪರೂಪದ ಘಟನೆಗೆ ಕೇರಳ ರಾಜಭವನ ಸಾಕ್ಷಿಯಾಗಿದೆ.

ಬುಧವಾರ ಕೇರಳ ರಾಜ್ಯಪಾಲ ಆರೀಫ್​ ಮೊಹಮ್ಮದ್​ ಖಾನ್​​ ರಾಜಭವನದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಕೇರಳ ರಾಜಭವನದಲ್ಲಿ ಈ ಉಪವಾಸ ಸತ್ಯಾಗ್ರಹ ಆರಂಭಿಸುವ ಮೂಲಕ ವರದಕ್ಷಿಣೆ ಎಂಬ ಮಹಾಮಾರಿ ವಿರುದ್ಧ ಜಾಗೃತಿ ಮೂಡಿಸಲು ರಾಜ್ಯಪಾಲರು ಮುಂದಾಗಿದ್ದಾರೆ.

ಮಹಿಳೆಯ ವಿರುದ್ಧದ ಕಿರುಕುಳಕ್ಕೆ ಅಂತ್ಯ ಹಾಡುವುದು ಮತ್ತು ಹಿಂಸೆ ವಿರುದ್ಧ ಜಾಗೃತಿ ಮೂಡಿಸುವುದು ರಾಜ್ಯಪಾಲರ ಉಪವಾಸದ ಪ್ರಮುಖ ಉದ್ದೇಶ ಎಂದು ರಾಜಭವನದ ಮೂಲಗಳು ತಿಳಿಸಿವೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img