Friday, July 30, 2021
Homeಜಿಲ್ಲೆಬೆಂಗಳೂರುತಿರುಪತಿಗೆ ಹೋಗುವ ಪ್ರವಾಸಿಗರಿಗೆ ಗುಡ್ ನ್ಯೂಸ್

ಇದೀಗ ಬಂದ ಸುದ್ದಿ

ತಿರುಪತಿಗೆ ಹೋಗುವ ಪ್ರವಾಸಿಗರಿಗೆ ಗುಡ್ ನ್ಯೂಸ್

ಬೆಂಗಳೂರು : ತಿರುಪತಿ ಪ್ರವಾಸಿಗರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಕೆ ಎಸ್ ಆರ್ ಟಿ ಸಿಯಿಂದ ಬೆಂಗಳೂರು-ತಿರುಪತಿ ಮಾರ್ಗದ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಮೂಲಕ ಸಾರಿಗೆ ಬಸ್ ನ ತಿರುಪತಿ ಪ್ರವಾಸಿಗರಿಗೆ ಕೆ ಎಸ್ ಆರ್ ಟಿ ಸಿ ಗುಡ್ ನ್ಯೂಸ್ ನೀಡಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು – ತಿರುಪತಿ ವಯಾ ಶಾಂತಿನಗರ, ಜಯನಗರ 4ನೇ ಬ್ಲಾಕ್, ನಾಗಸಂದ್ರ, ಎನ್ ಆರ್ ಕಾಲೋನಿ, ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ ನಗರದ ವಿವಿಧ ಸ್ಥಳಗಳಿಂದ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ಆರಂಭಿಸಿದೆ.

ಇದಲ್ಲದೇ ಬೆಂಗಳೂರು – ತಿರುಪತಿ ವಯಾ ಮೈಸೂರು ರಸ್ತೆ, ಸ್ಯಾಟಲೈಟ್ ಬಸ್ ನಿಲ್ದಾಣ, ವಿಜಯನಗರ ಟಿಟಿಎಂಸಿ, ನವರಂಗ್, ಮಲ್ಲೇಶ್ವರಂ ಸರ್ಕಲ್, ಕೆಂಪೇಗೌಡ ಬಸ್ ನಿಲ್ದಾಣ, ಐಟಿಐ ಗೇಟ್, ಕೆ ಆರ್ ಪುರಂ, ಹೊಸಕೋಟೆ ಮಾರ್ಗವಾಗಿ ಐರಾವತ ಕ್ಲಬ್ ಕ್ಲಾಸ್ ( ಮಲ್ಟಿ ಆಕ್ಸಲ್) ವಾಹನದೊಂದಿಗೆ ಪ್ಯಾಕೇಜ್ ಟೂರ್ ಅನ್ನು ದಿನಾಂಕ 16-07-2021ರಿಂದ ಪುನರಾರಂಭಿಸಲಾಗುತ್ತಿದೆ ಎಂದು ತಿಳಿಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img