Sunday, August 1, 2021
Homeಸುದ್ದಿ ಜಾಲರೈಲ್ವೆ ನಿಲ್ದಾಣದ ಮೇಲೆ ಫೈವ್​ ಸ್ಟಾರ್ ಹೋಟೆಲ್

ಇದೀಗ ಬಂದ ಸುದ್ದಿ

ರೈಲ್ವೆ ನಿಲ್ದಾಣದ ಮೇಲೆ ಫೈವ್​ ಸ್ಟಾರ್ ಹೋಟೆಲ್

ಗಾಂಧಿನಗರ: ರೈಲ್ವೆ ನಿಲ್ದಾಣಗಳೆಂದರೆ ನಿಮ್ಮ ಕಲ್ಪನೆಗೆ ಬರುವುದು ರೈಲು ಹಳಿಗಳು, ಫ್ಲೈ ಓವರ್​ಗಳು, ಟಿಕೆಟ್ ಸೆಂಟರ್​, ಇತ್ಯಾದಿಯಷ್ಟೇ. ಆದರೆ ಈ ರೈಲ್ವೆ ನಿಲ್ದಾಣವನ್ನು ನೀವು ನೋಡಿದರೆ, ನಿಮಗೆ ರೈಲ್ವೆ ನಿಲ್ದಾಣದ ಮೇಲಿರುವ ಕಲ್ಪನೆಯೇ ಬದಲಾಗಲಿದೆ. ಏಕೆಂದರೆ ಈ ರೈಲ್ವೆ ನಿಲ್ದಾಣದ ಮೇಲಿರುವುದು ಫೈವ್ ಸ್ಟಾರ್ ಹೋಟೆಲ್!

ಹೌದು! ಪ್ರಧಾನಿ ಮೋದಿಯವರು ದೇಶದ ರೈಲ್ವೆ ನಿಲ್ದಾಣಗಳನ್ನು ಆಧುನಿಕಗೊಳಿಸುವ ಬಗ್ಗೆ ಈ ಹಿಂದೆ ಮಾತನಾಡಿದ್ದರು. ಅದನ್ನು ಗುಜರಾತ್​ನ ಗಾಂಧಿನಗರ ರೈಲ್ವೆ ನಿಲ್ದಾಣ ಮಾಡಿ ತೋರಿಸಿದೆ. ನೋಡಲು ನಮ್ಮ ಬೆಂಗಳೂರಿನ ಮೆಟ್ರೋ ನಿಲ್ದಾಣದಂತೆಯೇ ಕಾಣುವ ಗಾಂಧಿನಗರ ರೈಲ್ವೆ ನಿಲ್ದಾಣದ ಮೇಲೆ ಫೈವ್ ಸ್ಟಾರ್ ಹೋಟೆಲ್​ ಒಂದನ್ನು ನಿರ್ಮಿಸಲಾಗಿದೆ. ಅದಕ್ಕೆ ರೈಲ್ವೆ ನಿಲ್ದಾಣದ ಒಳಗಿನಿಂದಲೇ ಹೋಗುವುದಕ್ಕೂ ಅವಕಾಶ ಮಾಡಿಕೊಡಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img