Friday, July 23, 2021
Homeಸುದ್ದಿ ಜಾಲಇಂಡೋನೇಷ್ಯಾದಲ್ಲಿ ಡೆಲ್ಟಾ ಹಾವಳಿ

ಇದೀಗ ಬಂದ ಸುದ್ದಿ

ಇಂಡೋನೇಷ್ಯಾದಲ್ಲಿ ಡೆಲ್ಟಾ ಹಾವಳಿ

ಜಗತ್ತನ್ನು ಕಾಡುತ್ತಿರುವ ಕೊರೋನಾ ಸೋಂಕಿನ ರೂಪಾಂತರ ತಳಿಗೆ ಮತ್ತೆ ಹಲವು ದೇಶಗಳು ಬೆಚ್ಚಿ ಬಿದ್ದಿವೆ. ಇಂಡೋನೇಷ್ಯಾದ ಜನರು ಡೆಲ್ಟಾ ಸೋಂಕಿನಿಂದ ತತ್ತರಿಸಿದ್ದು, ವೈದ್ಯಕೀಯ ಬಿಕ್ಕಟ್ಟು ಏರ್ಪಟ್ಟಿದೆ. ಅತಿ ಹೆಚ್ಚಿನ ಜನರು ತೀವ್ರ ಸ್ವರೂಪದ ಡೆಲ್ಟಾ ಸೋಂಕಿಗೆ ಒಳಗಾಗುತ್ತಿದ್ದು, ಆಸ್ಪತ್ರೆಗಳು ಸೋಂಕಿತರಿಂದ ಭರ್ತಿಯಾಗಿದೆ. ಇದರಿಂದ ಆಕ್ಸಿಜನ್​, ಬೆಡ್​ ಸಮಸ್ಯ ಉದ್ಭವಿಸಿದ್ದು, ಜನರು ಕಂಗಾಲಾಗಿದ್ದಾರೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ದ್ವೀಪ ರಾಷ್ಟ್ರದ ಆರೋಗ್ಯ ಸಚಿವರು, ಡೆಲ್ಟಾ ರೂಪಾಂತರ ರಳಿ ಅತಿ ವೇಗವಾಗಿ ಹರಡುತ್ತಿದ್ದು, ಇದನ್ನು ನಿಭಾಯಿಸುವುದು ದೊಡ್ಡ ಸವಾಲಾಗಿದೆ ಎಂದಿದ್ದಾರೆ.

ಕಳೆದ ಹತ್ತು ದಿನಗಳಿಂದ ಇಂಡೋನೇಷ್ಯಾದಲ್ಲಿ ಸೋಂಕಿರತ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮಂಗಳವಾರ ಒಂದೇ ದಿನದಲ್ಲಿ 47, 988 ಹೊಸ ಪ್ರಕರಣಗಳು ದಾಖಲಾಗಿದೆ. ಸೋಂಕು ನಿವಾರಣೆಗೆ ಈಗಾಗಲೇ ಕಂಟೈನ್ಮೆಟ್​ ಜೋನ್​ಗಳನ್ನು ರಚಿಸಲಾಗಿದೆ ಆದರೂ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿಲ್ಲ. ಇದರಿಂದ ಸೋಂಕು ನಿಯಂತ್ರಣಕ್ಕೆ ತರಲು ಇಂಡೋನೇಷ್ಯಾ ಪರಿತಪಿಸುತ್ತಿದೆ. ಭಾರತದಲ್ಲಿ ಮೊದಲು ಕಂಡು ಬಂದ ಈ ಡೆಲ್ಟಾ ಸೋಂಕು ಜಾವಾ ದ್ವೀಪದ ಹೊರ ಪ್ರದೇಶದಲ್ಲಿ ಕಂಡು ಬಂದಿದೆ. ಇಲ್ಲಿನ 11 ಪ್ರದೇಶಗಳಲ್ಲಿ ಈ ರೂಪಾಂತರಿ ಸೋಂಕು ಕಂಡು ಬಂದಿದೆ ಎಂದು ಇಂಡೋನೇಷ್ಯಾ ಆರೋಗ್ಯ ಸಚಿವ ಬುಡಿ ಗುನಾಡಿ ಸಾದಿಕಿನ್​ ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img