Sunday, August 1, 2021
Homeಸುದ್ದಿ ಜಾಲಕೊರೊನಾ ವ್ಯಾಕ್ಸಿನೇಷನ್‌ನಿಂದಾಗಿ ಮಗು ಮೃತಪಟ್ಟಿದೆ:ಪೋಷಕರ ಗಂಭೀರ ಆರೋಪ

ಇದೀಗ ಬಂದ ಸುದ್ದಿ

ಕೊರೊನಾ ವ್ಯಾಕ್ಸಿನೇಷನ್‌ನಿಂದಾಗಿ ಮಗು ಮೃತಪಟ್ಟಿದೆ:ಪೋಷಕರ ಗಂಭೀರ ಆರೋಪ

ಕೋಲಾರ: ವ್ಯಾಕ್ಸಿನ್ ಪಡೆದ ಮೂರು ತಿಂಗಳ ಹೆಣ್ಣು ಮಗು ಮೃತಪಟ್ಟಿರುವ ಘಟನೆ ಕೋಲಾರದಲ್ಲಿ ಜರುಗಿದೆ‌ ಎಂಬ ಆರೋಪ ಕೇಳಿ ಬಂದಿದೆ. ಮುಳಬಾಗಿಲು ತಾಲೂಕಿನ ಬೇವಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಮೂರು ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ್ದರಿಂದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಬೇವಹಳ್ಳಿ ಗ್ರಾಮದ ಅಂಜಲಿ ಹಾಗೂ ನಾಗರಾಜ್ ದಂಪತಿಗೆ ಮುದ್ದಾದ ಹೆಣ್ಣು ಮಗುವಿತ್ತು. ನಿನ್ನೆ ಬೇವಹಳ್ಳಿ ಗ್ರಾಮದಲ್ಲಿ ಕೊರೊನಾ ವ್ಯಾಕ್ಸಿನ್ ಜೊತೆಗೆ ಮೂರು ತಿಂಗಳ ಮಕ್ಕಳಿಗೆ ಲಸಿಕೆ ಸಹ ಹಾಕಲಾಗುತ್ತಿತ್ತು. ಹೀಗಾಗಿ ಲಸಿಕೆ ಹಾಕುವ ವೇಳೆ ಮಗುವಿಗೆ ಕೊರೊನಾ ಲಸಿಕೆ ಹಾಕಿ ಎಡವಟ್ಟು ಮಾಡಿದ್ದಾರೆ. ಇದರಿಂದಲೇ ಮಗು ಸಾವನ್ನಪ್ಪಿದೆ ಎಂದು ಪೋಷಕರು ಹಾಗೂ ಗ್ರಾಮಸ್ಥರು ಆರೋಪಿಸಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img