Friday, July 23, 2021
Homeಸುದ್ದಿ ಜಾಲಕೋವಿಡ್‌ನಿಂದ ಮೃತರಾದವರ ಮನೆಗಳಿಗೆ ಬಿಜೆಪಿ ವತಿಯಿಂದ ಭೇಟಿ

ಇದೀಗ ಬಂದ ಸುದ್ದಿ

ಕೋವಿಡ್‌ನಿಂದ ಮೃತರಾದವರ ಮನೆಗಳಿಗೆ ಬಿಜೆಪಿ ವತಿಯಿಂದ ಭೇಟಿ

ಚಾಮರಾಜನಗರ: ರಾಜ್ಯದಲ್ಲಿ ಕೋವಿಡ್‌ನಿಂದ ಮೃತಪಟ್ಟ ಎಲ್ಲರ ಮನೆಗಳಿಗೆ ಪಕ್ಷದ ವತಿಯಿಂದ ಭೇಟಿ ನೀಡುವ ಬಗ್ಗೆ ಯೋಚನೆ ಮಾಡಿದ್ದೇವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬುಧವಾರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ಪಕ್ಷದ ಪದಾಧಿಕಾರಿಗಳು ಮೃತಪಟ್ಟವರ ಕುಟುಂಬಗಳನ್ನು ಗುರುತಿಸಿ ಸಾಂತ್ವನ ಹೇಳುವ ಜೊತೆಗೆ ಅವರ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲಿದ್ದಾರೆ’ ಎಂದರು.

ರಾಜ್ಯ ಬಿಜೆಪಿಯಲ್ಲಿ ನಾಯಕರ್ವದ ಬಗ್ಗೆ ಎಲ್ಲಿಯೂ ಭಿನ್ನಾಭಿಪ್ರಾಯ ಇಲ್ಲ. ಇನ್ನೂ ಎರಡು ವರ್ಷ ಕಾಲ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಕಟೀಲ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img