Friday, July 30, 2021
Homeಸುದ್ದಿ ಜಾಲಓರ್ವ ಯುವತಿಗೋಸ್ಕರ ಇಬ್ಬರು ಆತ್ಮಹತ್ಯೆ

ಇದೀಗ ಬಂದ ಸುದ್ದಿ

ಓರ್ವ ಯುವತಿಗೋಸ್ಕರ ಇಬ್ಬರು ಆತ್ಮಹತ್ಯೆ

ಗುಂಟೂರು(ಆಂಧ್ರಪ್ರದೇಶ): ಯೆಡ್ಲಪಾಡ ಮಂಡಲದ ಚಾಂಗಿಸ್ಖಾನ್​ ಪೆಟಾದಲ್ಲಿ ವಿವಾಹಿತ ಯುವತಿಗೋಸ್ಕರ ಮೂರು ಕುಟುಂಬದಲ್ಲಿ ಬಿರುಗಾಳಿ ಎದ್ದಿದ್ದು,ಇಬ್ಬರು ಸಾವನ್ನಪ್ಪಿ, ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಘಟನೆ ನಡೆದಿದೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. 21 ವರ್ಷದ ಮಹೇಶ್ವರಿ ಅದೇ ಗ್ರಾಮದ ಯೋಧ ಶಿವಶಂಕರ್ ಜೊತೆ ಕಳೆದ 11 ತಿಂಗಳ ಹಿಂದೆ ಮದುವೆ ಮಾಡಿಕೊಂಡಿದ್ದಳು. ವಿವಾಹವಾದ ಬಳಿಕ ಶಿವಶಂಕರ್​ ಕೆಲಸಕ್ಕೆ ಹೋಗುತ್ತಾನೆ. ಮಹೇಶ್ವರಿಗೆ ಈ ಮ್ಯಾರೇಜ್​ ಇಷ್ಟವಿಲ್ಲದ ಕಾರಣ ತಾನು ಪ್ರೀತಿಸುತ್ತಿದ್ದ ಗೋಪಿ ಮನೆಗೆ ಹೋಗಿ ಉಳಿದುಕೊಳ್ಳುತ್ತಾಳೆ. ಗೋಪಿ ಪ್ರಕಾಶಂ ಜಿಲ್ಲೆಯಲ್ಲಿ ವಾಸವಾಗಿದ್ದನು. ಈ ವೇಳೆ ಮಹೇಶ್ವರಿ ಹಾಗೂ ಶಿವಶಂಕರ್​ನ ಮನೆಯವರು ಅಲ್ಲಿಗೆ ತೆರಳಿ ಮರಳಿ ಬರುವಂತೆ ಬೇಡಿಕೊಳ್ಳುತ್ತಾರೆ. ಆದರೆ ಮಹೇಶ್ವರಿ ವಾಪಸ್​ ಬರದೇ, ಗೋಪಿ ಮನೆಯಲ್ಲಿ ಉಳಿದುಕೊಂಡಿದ್ದಳು. ಇದರ ಬೆನ್ನಲ್ಲೇ ಶಿವಶಂಕರ್​ ರಜಾದಿನಕ್ಕಾಗಿ ಮತ್ತೆ ವಾಪಸ್​ ಊರಿಗೆ ಬಂದಿದ್ದಾನೆ. ಆತನಿಗೆ ಮಾಹಿತಿ ಗೊತ್ತಾಗಿದ್ದು, ಮನೆಗೆ ಬರುವಂತೆ ಮಹೇಶ್ವರಿ ಬಳಿ ಮನವಿ ಮಾಡಿದ್ದಾನೆ. ಇದಕ್ಕೆ ಆಕೆ ನಿರಾಕರಿಸಿದ್ದಾಳೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img