Sunday, August 1, 2021
Homeಸುದ್ದಿ ಜಾಲರಾಜಕೀಯ ಪ್ರವೇಶಿಸುವ ಯಾವುದೇ ಯೋಜನೆಗಳಿಲ್ಲ :ರಜನಿಕಾಂತ್

ಇದೀಗ ಬಂದ ಸುದ್ದಿ

ರಾಜಕೀಯ ಪ್ರವೇಶಿಸುವ ಯಾವುದೇ ಯೋಜನೆಗಳಿಲ್ಲ :ರಜನಿಕಾಂತ್

ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಊಹಾಪೋಹಗಳಿಗೆ ಅಂತ್ಯ ಹಾಡಿರುವ ನಟ ರಜನಿಕಾಂತ್ ಸೋಮವಾರ ತಮ್ಮ ರಜಿನಿ ಮಕ್ಕಳ್ ಮಂಡ್ರಂ (Rajini Makkal Mandram) ಅನ್ನು ವಿಸರ್ಜಿಸಲಾಗಿದೆ ಎಂದು ಹೇಳುವ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ.

ರಜಿನಿ ಮಕ್ಕಳ್ ಮಂಡ್ರಂ-ಆರ್‌ಎಂಎಂ ವಿಸರ್ಜಿಸುವ ನಿರ್ಧಾರವನ್ನು ಪ್ರಕಟಿಸಿದ ಸೂಪರ್‌ಸ್ಟಾರ್ ರಜನಿಕಾಂತ್ ರಜಿನಿ ಮಕ್ಕಳ್ ಮಂಡ್ರಂ ಅನ್ನು ಅಭಿಮಾನಿಗಳ ಕಲ್ಯಾಣ ಸಂಘವಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಿಂದಾಗಿ ನಾವು ನಿರೀಕ್ಷಿಸಿದಂತೆ ಏನೂ ಆಗಲಿಲ್ಲ. ಭವಿಷ್ಯದಲ್ಲಿ ರಾಜಕೀಯ ಪ್ರವೇಶಿಸುವ ಯಾವುದೇ ಯೋಜನೆಯೂ ನನಗಿಲ್ಲ ಎಂದು ನಟ ರಜನಿಕಾಂತ್ ಸ್ಪಷ್ಟಪಡಿಸಿದರು. ವಾಸ್ತವವಾಗಿ ಸೋಮವಾರ ರಜಿನಿ ಮಕ್ಕಳ್ ಮಂಡ್ರಂ ಕಾರ್ಯಕರ್ತರನ್ನು ಭೇಟಿಯಾದ ನಂತರ ರಜನಿಕಾಂತ್ ಅವರು ಈ ಘೋಷಣೆ ಮಾಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img