Friday, July 23, 2021
Homeಸುದ್ದಿ ಜಾಲಸೆಪ್ಟೆಂಬರ್‌ನಿಂದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದಿಸಲಿದೆ ಸೀರಂ ಇನ್‌ಸ್ಟಿಟ್ಯೂಟ್

ಇದೀಗ ಬಂದ ಸುದ್ದಿ

ಸೆಪ್ಟೆಂಬರ್‌ನಿಂದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದಿಸಲಿದೆ ಸೀರಂ ಇನ್‌ಸ್ಟಿಟ್ಯೂಟ್

ನವದೆಹಲಿ, ಜುಲೈ 13: ಸೀರಂ ಇನ್‌ಸ್ಟಿಟ್ಯೂಟ್ ರಷ್ಯಾದ ಸ್ಪುಟ್ನಿಕ್ V ಕೊರೊನಾ ಲಸಿಕೆಯನ್ನು ಸೆಪ್ಟೆಂಬರ್‌ನಿಂದ ಉತ್ಪಾದಿಸಲಿದೆ ಎಂದು ರಷ್ಯಾದ ಮೇಕರ್ ಮಾಹಿತಿ ನೀಡಿದೆ.

ಪುಣೆಯಲ್ಲಿ ಲಸಿಕೆ ಉತ್ಪಾದನೆ ಶುರುವಾಗಲಿದೆ, ರಷ್ಯಾದ ಆರ್‌ಡಿಐಎಫ್‌ ನೀಡಿರುವ ಮಾಹಿತಿ ಪ್ರಕಾರ ಪ್ರತಿ ವರ್ಷ ಭಾರತದಲ್ಲಿ 300 ಮಿಲಿಯನ್ ಕೊರೊನಾ ಲಸಿಕೆ ಉತ್ಪಾದಿಸಲಿದೆ ಎಂದಿದೆ.

ತಂತ್ರಜ್ಞಾನ ರವಾನೆ ಈಗಾಗಲೇ ಆರಂಭವಾಗಿದೆ, ಸೆಪ್ಟೆಂಬರ್‌ನಲ್ಲಿ ಉತ್ಪಾದನೆ ಶುರುವಾಗಲಿದೆ, ಸೀರಂ ಈಗಾಗಲೇ ಸೆಲ್ ಹಾಗೂ ವೆಕ್ಟರ್ ಮಾದರಿಗಳನ್ನು ಗಮಾಲಿಯಾ ಕೇಂದ್ರದಿಂದ ಪಡೆದುಕೊಂಡಿದೆ.

ಆದರ್ ಪೂನಾವಾಲ ಮಾತನಾಡಿ, ಆರ್‌ಡಿಐಎಫ್ ಪಾಲುದಾರರಾಗಿರುವುದಕ್ಕೆ ಸಂತೋಷವಾಗಿದೆ, ಸ್ಪುಟ್ನಿಕ್ ಲಸಿಕೆಯು ಭಾರತ ಸೇರಿದಂತೆ ಇಡೀ ವಿಶ್ವಾದ್ಯಂತ ಪ್ರಚಲಿತದಲ್ಲಿರುವ ಲಸಿಕೆಯಾಗಿದೆ.

ಇದು ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತದೆ, ಆಗಸ್ಟ್‌ನಲ್ಲಿ 16 ರಿಂದ 18 ಕೋಟಿಯಷ್ಟು ಲಸಿಕೆಯನ್ನು ಉತ್ಪಾದಿಸಲಾಗುತ್ತದೆ, ಸೆಪ್ಟೆಂಬರ್‌ನಲ್ಲಿ ಸುಮಾರು 30 ಕೋಟಿ ಕೊರೊನಾ ಲಸಿಕೆ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img