Friday, July 30, 2021
Homeಸುದ್ದಿ ಜಾಲ'ಪಿಂಚಣಿ' ಹಣದಿಂದ ರಸ್ತೆ ಹಳ್ಳ ಮುಚ್ಚಲು ಮುಂದಾದ ನಿವೃತ್ತ ಹಿರಿಯ ಜೋಡಿಗಳು

ಇದೀಗ ಬಂದ ಸುದ್ದಿ

‘ಪಿಂಚಣಿ’ ಹಣದಿಂದ ರಸ್ತೆ ಹಳ್ಳ ಮುಚ್ಚಲು ಮುಂದಾದ ನಿವೃತ್ತ ಹಿರಿಯ ಜೋಡಿಗಳು

ದೇಶದ ರಸ್ತೆಗಳ ಮೇಲಿರುವ ಗುಂಡಿಗಳು ಪ್ರತಿ ವರ್ಷ ಸಾವಿರಾರು ಮಂದಿಯ ಜೀವ ತೆಗೆದುಕೊಳ್ಳುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ಅದೆಷ್ಟೇ ವರದಿಗಳು ಬಂದರೂ ಆಡಳಿತಗಳು ದಿವ್ಯ ನಿರ್ಲಕ್ಷ್ಯ ವಹಿಸುವುದೂ ಹೊಸ ವಿಚಾರವೇನಲ್ಲ. ಹೈದರಾಬಾದ್‌ನ ಹಿರಿಯ ಜೋಡಿಯೊಂದು ಕಳೆದ 11 ವರ್ಷಗಳಿಂದ ತಮ್ಮ ನಗರದ ರಸ್ತೆಗಳಲ್ಲಿ ಬಿದ್ದಿರುವ ಒಂದೊಂದೇ ಹಳ್ಳವನ್ನು ತಮ್ಮದೇ ಶ್ರಮ ಹಾಗೂ ದುಡ್ಡಿನಿಂದ ಸರಿಪಡಿಸುತ್ತಾ ಬಂದಿದ್ದಾರೆ.

73 ವರ್ಷದ ಗಂಗಾಧರ್‌ ತಿಲಕ್ ಕಟ್ನಾಂ ಹಾಗೂ ಅವರ ಮಡದಿ ವೆಂಕಟೇಶ್ವರಿ ಕಟ್ನಾಂ (64) ತಮ್ಮದೇ ಕಾರಿನಲ್ಲಿ ನಗರದ ವಿವಿಧ ರಸ್ತೆಗಳು ಹಾಗೂ ಜಂಕ್ಷನ್‌ಗಳಿಗೆ ಭೇಟಿ ಕೊಡುತ್ತಾ, ಹಳ್ಳಗಳನ್ನು ಸರಿಪಡಿಸುತ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img