Friday, July 30, 2021
Homeಕೋವಿಡ್-19ಕೋವಿಡ್‌ ವ್ಯಾಕ್ಸಿನ್​ಗೆ ಮುಗಿಬಿದ್ದ​​​ ಜನ

ಇದೀಗ ಬಂದ ಸುದ್ದಿ

ಕೋವಿಡ್‌ ವ್ಯಾಕ್ಸಿನ್​ಗೆ ಮುಗಿಬಿದ್ದ​​​ ಜನ

ಪ್ಯಾರೀಸ್(ಫ್ರಾನ್ಸ್):ಕೋವಿಡ್ ಲಸಿಕೆ ಕೊರತೆ ಎಲ್ಲೆಡೆ ಕಾಡುತ್ತಿದೆ. ಕೊರೊನಾದಿಂದ ರಕ್ಷಣೆಗಾಗಿ ಎಲ್ಲರೂ ವ್ಯಾಕ್ಸಿನೇಷನ್​ನತ್ತ ಒಲವು ತೋರುತ್ತಿದ್ದಾರೆ. ಫ್ರಾನ್ಸ್​ನಲ್ಲಿ ಸೋಮವಾರ ಒಂದೇ ದಿನ ಸುಮಾರು 9 ಲಕ್ಷ ಮಂದಿ ಕೋವಿಡ್ ವ್ಯಾಕ್ಸಿನ್​ಗಾಗಿ ನೋಂದಾಯಿಸಿಕೊಂಡಿದ್ದಾರೆ.

ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಇಲ್ಲದಿದ್ದರೆ ಅಥವಾ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡ ಪ್ರಮಾಣ ಪತ್ರವಿಲ್ಲದಿದ್ದರೆ, ಅಂತಹ ವ್ಯಕ್ತಿಗಳಿಗೆ ನಿರ್ಬಂಧ ವಿಧಿಸುವುದಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಎಚ್ಚರಿಕೆ ನೀಡಿದ ಬಳಿಕ ಲಕ್ಷಾಂತರ ಜನರು ಕೋವಿಡ್ ವ್ಯಾಕ್ಸಿನೇಷನ್​ಗೆ ನೋಂದಾಯಿಸಿಕೊಂಡಿದ್ದಾರೆ.

ಅದರಲ್ಲೂ ಆರೋಗ್ಯ ಸಿಬ್ಬಂದಿ ಸೆಪ್ಟೆಂಬರ್ 15ರೊಳಗೆ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಬೇಕು. ಇಲ್ಲವಾದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img