Thursday, July 29, 2021
Homeಜಿಲ್ಲೆಮೈಸೂರುನನ್ನ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದೆ:ಅರುಣ ಕುಮಾರಿ

ಇದೀಗ ಬಂದ ಸುದ್ದಿ

ನನ್ನ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದೆ:ಅರುಣ ಕುಮಾರಿ

ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ 25 ಕೋಟಿ ವಂಚನೆ ಪ್ರಕರಣದಲ್ಲಿ ಕೇಳಿಬರುತ್ತಿರುವ ಮುಖ್ಯ ಆರೋಪಿ ಅರುಣ ಕುಮಾರಿ ಎಂಬ ಮಹಿಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಪ್ರಕರಣದಲ್ಲಿ ನನ್ನನ್ನು ಎಳೆದುತಂದು ದುರುಪಯೋಗಪಡಿಸಿಕೊಳ್ಳಲಾಗಿದೆ. ನಿರ್ಮಾಪಕ ಉಮಾಪತಿಯವರು ಮಾಡಿದ್ದು ತಪ್ಪು, ನನ್ನನ್ನು ಬಳಸಿಕೊಂಡು ಹೆಣ್ಣು ಸಮಾಜದ ಮುಂದೆ ತಲೆಯೆತ್ತಿ ಬದುಕದಂತೆ ಮಾಡಿದ್ದೀರಿ, ಇಂದು ನಾನು ಹೊರಗೆ ಹೇಗೆ ಜನರ ಮುಂದೆ ಮುಖ ತೋರಿಸಿ ಹೇಗೆ ಬದುಕಬೇಕೆಂದು ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.

ಉಮಾಪತಿಯವರ ಜೊತೆ ವಾಟ್ಸಾಪ್ ಚಾಟಿಂಗ್ 32 ಪೇಜ್ ಇದೆ ಎನ್ನುವುದು ಸುಳ್ಳು. ಅವರೊಂದಿಗೆ ಕಳೆದ ಮಾರ್ಚ್ 30ರಿಂದ ಸಂಪರ್ಕದಲ್ಲಿದ್ದೆ, ಇದರಿಂದ ಉಮಾಪತಿ ಅವರಿಗೆ ಲಾಭನೋ ನಷ್ಟಾನೋ ಗೊತ್ತಿಲ್ಲ. ನೇರವಾಗಿ ದರ್ಶನ್ ಸರ್ ಅವರಿಗೆ ಹೇಳಬಹುದಿತ್ತು. ಇದು ಸಣ್ಣ ವಿಷಯ. ಅವರು ದೊಡ್ಡ ವ್ಯಕ್ತಿಗಳು, ಅವರ ಮಧ್ಯೆಯೇ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು. ಸುಮ್ಮನೆ ಹೊರಗೆ ಎಳೆದುತಂದು ದೊಡ್ಡ ವಿಷಯ ಮಾಡಲಾಗಿದೆ ಎಂದರು.

ಈ ಪ್ರಕರಣದಿಂದ ನನಗೆ ಅವಮಾನ ಆಗುತ್ತಿದೆ. ಒಂದು ಹೆಣ್ಣಿಗೆ ಏಕ ಇಷ್ಟೊಂದು ಅವಮಾನ ಮಾಡುತ್ತಿದ್ದೀರಿ, ನನ್ನನ್ನು ಬಳಸಿಕೊಂಡು ಈ ರೀತಿ ಮಾಡುತ್ತಿರುವುದು ತಪ್ಪು, ನನ್ನನ್ನು ಇದರಿಂದ ದಯವಿಟ್ಟು ಹೊರಗೆ ತನ್ನಿ, ನನ್ನ ಪರಿಸ್ಥಿತಿ ಶೋಚನೀಯವಾಗಿದೆ, ನಾನು ಖಿನ್ನತೆಗೆ ಹೋಗಿದ್ದೇನೆ, ನನ್ನ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದೆ ಎಂದು ಹೇಳಿಕೊಂಡರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img