Friday, July 30, 2021
Homeಸುದ್ದಿ ಜಾಲಕಸದ ರಾಶಿಯಿಂದ ತುಂಬಿಕೊಂಡ ಲಂಡನ್‌ ರಸ್ತೆಗಳು

ಇದೀಗ ಬಂದ ಸುದ್ದಿ

ಕಸದ ರಾಶಿಯಿಂದ ತುಂಬಿಕೊಂಡ ಲಂಡನ್‌ ರಸ್ತೆಗಳು

ಸೋಮವಾರ ಬೆಳಗ್ಗೆ ಲೀಸೆಸ್ಟರ್ ಸ್ಕ್ವೇರ್ ಬಳಿಯ ಥಿಯೇಟರ್ ಹೊರಗೆ ಬಿದ್ದಿದ್ದ ಕಸದ ರಾಶಿ ನೋಡಿ ವ್ಯಕ್ತಿಯೊಬ್ಬರು ದಿಗ್ಭ್ರಮೆಗೊಂಡಿದ್ದಾರೆ. ಫೈನಲ್‌ ಪಂದ್ಯದಲ್ಲಿ ಇಟಲಿ ಎದುರು ಪೆನಾಲ್ಟಿಯಲ್ಲಿ ಸೋತ ಇಂಗ್ಲೆಂಡ್‌ ಅಭಿಮಾನಿಗಳು ವಿಜಯೋತ್ಸವ ಆಚರಿಸಿಲ್ಲವಾದರೂ, ಪಂದ್ಯ ನಡೆಯುವ ವೇಳೆ ಹಾಗೂ ಪಂದ್ಯ ಆರಂಭಕ್ಕೂ ಮುನ್ನ ಸೆಂಟ್ರಲ್‌ ಲಂಡನ್‌ನಲ್ಲಿ ಹಾಗೂ ಲೀಸೆಸ್ಟರ್‌ ಸ್ಕ್ವೇರ್‌ನಲ್ಲಿ ಒಟ್ಟಾಗಿ ಸೇರಿದ್ದ ಜನರು ಭಾನುವಾರ ಪಾರ್ಟಿ ಮಾಡಿದ್ದು, ಬಿಯರ್ ಬಾಟಲಿಗಳು ಮತ್ತು ಡಬ್ಬಿಗಳು ಮುಂತಾದ ಕಸದ ರಾಶಿ ಸೋಮವಾರ ಬೆಳಗ್ಗೆ ಸೆಂಟ್ರಲ್‌ ಲಂಡನ್‌ನ ರಸ್ತೆಗಳಲ್ಲಿ ಸಾಲುಗಟ್ಟಿ ಬಿದ್ದಿದ್ದವು.

ಈ ಹಿನ್ನೆಲೆ ಯುರೋ 2020 ಫೈನಲ್ ಪಂದ್ಯವನ್ನು ವೀಕ್ಷಿಸಲು ನೆರೆದಿದ್ದ ಜನಸಮೂಹವು ಉಳಿದಿದ್ದ ಕಸವನ್ನು ತೆಗೆದುಹಾಕಲು ಸ್ವಚ್ಛಗೊಳಿಸುವ ಕಾರ್ಯ ಸೋಮವಾರ ನಡೆಯುತ್ತಲೇ ಇತ್ತು. ಲೀಸೆಸ್ಟರ್‌ ಸ್ಕ್ವೇರ್‌ ಬಳಿಯ ರೆಸ್ಟೋರೆಂಟ್‌ನ ಮೇಲೂ ಬಿಯರ್‌ ಬಾಟಲಿಗಳು ತುಂಬಿದ್ದವು. ಅದನ್ನು ಕ್ಲೀನ್‌ ಮಾಡಲು ಉದ್ದನೆಯ ಕೋಲುಗಳನ್ನು ಬಳಸಲಾಗಿದೆ ಎಂದು ಆ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ. ಅಲ್ಲದೆ, ಇದು ನಿಜಕ್ಕೂ ಅಸಹ್ಯಕರವಾಗಿತ್ತು ಎಂದ ಅವರು, ರೆಸ್ಟೋರೆಂಟ್ ಮೇಲೆ ಫುಟ್ಬಾಲ್ ಅಭಿಮಾನಿಗಳು ಹೋಗಿರಬಹುದು. ಹೀಗಾಗಿ ಅಲ್ಲೆಲ್ಲ ಬಾಟಲಿಗಳು ಬಿದ್ದಿವೆ ಎಂದು ಅವರು ಭಾವಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img