Friday, July 23, 2021
Homeಜಿಲ್ಲೆಮಂಡ್ಯನಾನು ಈ ಮಣ್ಣಿನ ಸೊಸೆ ಎಲ್ಲಾ ಅಧಿಕಾರವೂ ನನಗಿದೆ : ಸುಮಲತಾ

ಇದೀಗ ಬಂದ ಸುದ್ದಿ

ನಾನು ಈ ಮಣ್ಣಿನ ಸೊಸೆ ಎಲ್ಲಾ ಅಧಿಕಾರವೂ ನನಗಿದೆ : ಸುಮಲತಾ

ಮಂಡ್ಯ: ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ನಡುವಿನ ವಾಕ್ಸಮರ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ತಮ್ಮ ವಿರುದ್ಧ ಕೇಳಿ ಬಂದ ಟೀಕೆ, ಆರೋಪಗಳಿಗೆ ಸುಮಲತಾ ಇಂದು ತಮ್ಮ ಕ್ಷೇತ್ರ ಮಂಡ್ಯದಲ್ಲಿ ಪ್ರತಿಯುತ್ತರ ನೀಡಿದರು. ಚುನಾವಣೆ ಸಮಯದಲ್ಲಿ ಮಾತನಾಡಿದ ದಾಟಿಯಲ್ಲೇ ಮಾತು ಆರಂಭಿಸಿದ ಅವರು ನಾನು ಈ ಮಣ್ಣಿನ ಸೊಸೆ ಎಲ್ಲಾ‌ ಅಧಿಕಾರವೂ ನನಗಿದೆ. ನಿಮಗೆ ನಾನು ಬೇಡ ಎನಿಸಿದಾಗ ಟಾಟಾ ಹೇಳಿ ಹೋಗ್ತೀನಿ. ನಿಮ್ಮ ಹೋರಾಟದ ಬೆಂಬಲವಾಗಿ ನಾನೀದ್ದೀನಿ, ನನಗೆ ಶಕ್ತಿ ನೀಡಿ. ನನ್ನಲ್ಲಿ ತಪ್ಪಿದ್ದರೇ ಹೇಳಿ ತಿದ್ದಿಕೊಳ್ತೀನಿ ಎಂದು ಭಾವನಾತ್ಮಕವಾಗಿ ಮಾತನಾಡಿದರು.

ನನ್ನ ಮಾತಿನಿಂದ ರೈತರಿಗೆ ಆತಂಕ ಆಯ್ತು ಅಂತಾರೆ. ರೈತರೇ ನೀವೆ ಹೇಳಿ ನನ್ನ ಮಾತಿನಿಂದ ನಿಮಗೆ ಆತಂಕ ಆಯ್ತ.? ಅಕ್ರಮ ಗಣಿಗಾರಿಕೆಯಿಂದ KRS ಬಿರುಕಾಗುವ ಸಾಧ್ಯತೆ ಇದೆ ಎಂದಿದ್ದೇನೆ. ಮಾತೆತ್ತಿದರೆ ಮಂಡ್ಯದವರು ಮುಗ್ಧರು ಅಂತಾರೆ. ಹೇಗೆ ಬೇಕಾದರು ಮೋಸ ಮಾಡುಬಹುದು ಅನ್ನೋದು ನಿಮ್ಮ ಅಭಿಪ್ರಾಯನಾ ಎಂದು ಪರೋಕ್ಷವಾಗಿ ಎಚ್​ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು. ಇವತ್ತು ಸುಮಲತಾ ಏನೇ ಮಾತನಾಡಿದರು ರಾಜಕೀಯ ಬಣ್ಣ ಕೊಡುವ ಕೆಲಸ ಆಗುತ್ತೆ. ಅದರ ಬಗ್ಗೆ ನನಗೇನು ಬೇಜಾರು ಇಲ್ಲ. ಅವರ ಒಂದೆರೆಡು ಮಾತಲ್ಲಿ ನಿಜ ಇದೆ ಒಪ್ಪಿಕೊಳ್ಳೋಣ. ಸುಮಲತಾಗೆ ರಾಜಕೀಯ ಹೊಸದು, ಮಾಹಿತಿ ಕೊರತೆ ಇದೆ ಎನ್ನುತ್ತಾರೆ. ನಿಜ ನನಗೆ ರಾಜಕೀಯ ಹೊಸದೇ ಭ್ರಷ್ಟಾಚಾರನೂ ಹೊಸದೇ. ನಾನು ಸಿನಿಮಾರಂಗದಿಂದ ಬಂದವಲೇ, ಅಲ್ಲಿ ಇದೆಲ್ಲಾ ಇರಲ್ಲ. ಜನ ಬುದ್ದಿ ಕಲಿಸಿದರೆ, ನನ್ನಲ್ಲಿ ತಪ್ಪಿದ್ದರೆ ಶಿಕ್ಷೆಗೆ ನಾನು ಸಿದ್ಧ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img