Thursday, July 29, 2021
Homeಸುದ್ದಿ ಜಾಲದಾಖಲೆ ಬರೆದ ಭಾರತದ ಷೇರುಪೇಟೆ

ಇದೀಗ ಬಂದ ಸುದ್ದಿ

ದಾಖಲೆ ಬರೆದ ಭಾರತದ ಷೇರುಪೇಟೆ

ಭಾರತೀಯ ಷೇರುಪೇಟೆ ಸಕಾರಾತ್ಮಕವಾಗಿ ಏರಿಕೆ ಮುಂದುವರಿಸಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ ಹೊಸ ದಾಖಲೆಯ ಮಟ್ಟವನ್ನೇ ತಲುಪಿ ಬಿಟ್ಟಿದೆ. ದಿನದ ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ 235 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 73.90 ಪಾಯಿಂಟ್ಸ್ ಹೆಚ್ಚಾಗಿದೆ.

ಬೆಳಿಗ್ಗೆ 9.18ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 235.39 ಪಾಯಿಂಟ್ಸ್‌ ಅಥವಾ ಶೇಕಡಾ 0.45ರಷ್ಟು ಏರಿಕೆಗೊಂಡು 52608.08 ಪಾಯಿಂಟ್ಸ್‌ ಮುಟ್ಟಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 73.90 ಪಾಯಿಂಟ್ಸ್ ಅಥವಾ ಶೇಕಡಾ 0.47ರಷ್ಟು ಹೆಚ್ಚಾಗಿ 15766.50 ಪಾಯಿಂಟ್ಸ್‌ ತಲುಪಿದೆ.

ದಿನದ ವಹಿವಾಟು ಆರಂಭಗೊಂಡಾಗ 1,507 ಕಂಪನಿಗಳಲ್ಲಿ ವಹಿವಾಟು ಪ್ರಾರಂಭವಾಯಿತು, ಅದರಲ್ಲಿ ಸುಮಾರು 1,205 ಷೇರುಗಳು ಏರಿಕೆಗೊಂಡರೆ, 234 ಕುಸಿದವು. ಅದೇ ಸಮಯದಲ್ಲಿ, 68 ಕಂಪನಿಗಳ ಷೇರು ಬೆಲೆ ಯಾವುದೇ ವ್ಯತ್ಯಾಸಗೊಂಡಿಲ್ಲ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img