Friday, July 30, 2021
Homeಸುದ್ದಿ ಜಾಲದರ್ಶನ್ ಶಕ್ತಿಯುತರು, ವಿವಾದವನ್ನು ಬಗೆಹರಿಸಿಕೊಳ್ತಾರೆ: ನಿಖಿಲ್ ಕುಮಾರಸ್ವಾಮಿ

ಇದೀಗ ಬಂದ ಸುದ್ದಿ

ದರ್ಶನ್ ಶಕ್ತಿಯುತರು, ವಿವಾದವನ್ನು ಬಗೆಹರಿಸಿಕೊಳ್ತಾರೆ: ನಿಖಿಲ್ ಕುಮಾರಸ್ವಾಮಿ

ದೇವನಹಳ್ಳಿ: ನಟ ದರ್ಶನ್​ ಅವರು ನಮ್ಮ ಚಿತ್ರರಂಗದ ಹಿರಿಯ ಕಲಾವಿದರು. ಅವರು ಶಕ್ತಿಯುತವಾಗಿದ್ದು, ವಿವಾದವನ್ನು ಬಗೆಹರಿಸಿಕೊಳ್ಳುತ್ತಾರೆ ಎಂದು ನಿಖಿಲ್​ ಕುಮಾರಸ್ವಾಮಿ ಹೇಳಿದ್ದಾರೆ.

ಪಕ್ಷ ಸಂಘಟನೆ ವಿಚಾರಕ್ಕೆ ದೇವನಹಳ್ಳಿಗೆ ಆಗಮಿಸಿದ್ದ ನಿಖಿಲ್, ದರ್ಶನ್ ಬಹಳ ಶಕ್ತಿಯುತವಾಗಿದ್ದಾರೆ. ಹಿರಿಯ ನಟರಾಗಿ ನಮ್ಮ ಇಂಡಸ್ಟ್ರಿಗೆ ಕೊಡುಗೆ ಕೊಟ್ಟಿದ್ದಾರೆ. ಕಳೆದ ಎರಡು-ಮೂರು ದಿನಗಳಿಂದ ವಿವಾದ ನಡೆಯುತ್ತಿದೆ. ಭಗವಂತ ಅವರಿಗೆ ಶಕ್ತಿ ಕೊಟ್ಟಿದ್ದು, ವಿವಾದವನ್ನು ಸ್ವತಃ ಅವರೇ ಬಗೆಹರಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಸುಮಲತಾ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಕೆಲವು ದಿನಗಳಿಂದ ನಡೆದ ನಾಟಕದ ಚರ್ಚೆ ಮಾಡುವ ಬದಲು ಜನರೇ ತೀರ್ಮಾನ ಮಾಡಲೆಂದು ವರಿಷ್ಠರು ಮತ್ತು ನಮ್ಮ ನಾಯಕರು ತೀರ್ಮಾನಿಸಿದ್ದಾರೆ ಮತ್ತು ಟ್ವೀಟ್ ಸಹ ಮಾಡಲಾಗಿದೆ. ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲವೆಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img