Friday, July 23, 2021
Homeಸಿನಿಮಾನಿರ್ಮಾಪಕ ಉಮಾಪತಿ ವಿರುದ್ದ ಅರುಣಾ ಕುಮಾರಿ ಆರೋಪ

ಇದೀಗ ಬಂದ ಸುದ್ದಿ

ನಿರ್ಮಾಪಕ ಉಮಾಪತಿ ವಿರುದ್ದ ಅರುಣಾ ಕುಮಾರಿ ಆರೋಪ

ನಟ ದರ್ಶನ್​ ಹೆಸರಲ್ಲಿ ವಂಚನೆ ಯತ್ನ ಪ್ರಕರಣವು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ದರ್ಶನ್​ ಆಪ್ತರ ನಡುವೆ ಆರೋಪ ಪ್ರತ್ಯಾರೋಪಗಳ ನಡುವೆಯೇ ಪ್ರಕರಣದ ಆರೋಪಿ ಅರುಣಾ ಕುಮಾರಿ ಇಷ್ಟೆಲ್ಲಾ ಆಗೋಕೆ ನಿರ್ಮಾಪಕ ಉಮಾಪತಿಯೇ ನೇರ ಕಾರಣ ಎಂದು ದೂರಿದ್ದಾರೆ.

ಈ ಪ್ರಕರಣದಲ್ಲಿ ನಟ ದರ್ಶನ್​ ನಿಜಕ್ಕೂ ಅಮಾಯಕ. ಆದರೆ ಉಮಾಪತಿಯವರದ್ದು ಸಂಪೂರ್ಣ ತಪ್ಪಿದೆ. ನನ್ನ ಲೈಫ್​ ಹಾಳಾದರೆ ಅದಕ್ಕೆ ಉಮಾಪತಿಯೇ ನೇರ ಕಾರಣ. ನಾನು ಲೋನ್​ಗೆ ಅಪ್ರೋಚ್​ ಮಾಡಿದ್ದೆ ಅಷ್ಟೇ. ಲೋನ್​ ಅಪ್ರೋಚ್​ ಮಾಡೋಕೂ ಅಪ್ಲೈ ಮಾಡೋಕು ತುಂಬಾನೇ ವ್ಯತ್ಯಾಸ ಇದೆ.

ಸುದ್ದಿಗೋಷ್ಠಿಯಲ್ಲಿ ಉಮಾಪತಿ ನನ್ನ ಪರಿಚಯ ಇರಲಿಲ್ಲ ಎಂದೆಲ್ಲ ಹೇಳಿದ್ದಾರೆ. ಆದರೆ ನನಗೆ ಅವರು ಮಾರ್ಚ್ 30ರಿಂದಲೇ ಪರಿಚಯವಾಗಿದ್ದರು. ನಟ ದರ್ಶನ್​ರನ್ನ ನೇರವಾಗಿ ಭೇಟಿಯಾಗೋದು ಅಂದರೆ ಯಾರಿಂದಲೂ ಅಷ್ಟು ಸುಲಭವಾಗಿ ಆಗೋ ಕೆಲಸವಲ್ಲ. ಅಂತದ್ರಲ್ಲಿ ನಾನು 2 ಬಾರಿ ಅವರನ್ನ ಭೇಟಿಯಾಗಿದ್ದೇನೆ ಅಂದರೆ ನನ್ನ ಹಿಂದೆ ಯಾರಿದ್ದರು ಅನ್ನೋದನ್ನ ನೀವೇ ಊಹೆ ಮಾಡಿ ಎಂದಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img