Friday, July 30, 2021
Homeಜಿಲ್ಲೆಮೈಸೂರುಹೊಸ ಆಡಿಯೋದಲ್ಲಿ ಕೇಳಿಬಂತು ಮತ್ತೊಬ್ಬನ ಹೆಸರು

ಇದೀಗ ಬಂದ ಸುದ್ದಿ

ಹೊಸ ಆಡಿಯೋದಲ್ಲಿ ಕೇಳಿಬಂತು ಮತ್ತೊಬ್ಬನ ಹೆಸರು

ಮೈಸೂರು: ನಟ ದರ್ಶನ್ ಹೆಸರಲ್ಲಿ ಹಣ ವಂಚನೆ ಯತ್ನ ಪ್ರಕರಣವು​ ಅವರ್ ಬಿಟ್, ಇವರ್ ಬಿಟ್, ಇವನ್ಯಾರು? ಎನ್ನುವಂತಾಗಿದೆ. ಇದೀಗ ಮತ್ತೊಂದು ಆಡಿಯೋ ವೈರಲ್​ ಆಗಿದ್ದು, ಅದರಲ್ಲಿ ಮಲ್ಲೇಶ್​ ಎಂಬ ಹೆಸರು ಕೇಳಿಬರುತ್ತಿದೆ.

ದರ್ಶನ್ ಸ್ನೇಹಿತರ ಬಳಿ ಆರೋಪಿ ಅರುಣಾ ಕುಮಾರಿಯನ್ನು ಕಳುಹಿಸಿದ್ದು ನಿರ್ಮಾಪಕ ಅಲ್ಲ ಎನ್ನುತ್ತಿದೆ ಹೊಸ ಆಡಿಯೋ. ಹಾಗಾದ್ರೆ ಅರುಣಾ ಕುಮಾರಿಯನ್ನು ಕಳುಹಿಸಿದ್ದು ಯಾರು ಎಂಬ ಪ್ರಶ್ನೆಗೆ ಉತ್ತರ ಕಗ್ಗಾಂಟಾಗುತ್ತಿದೆ. ಆರೋಪಿ ಮಹಿಳೆಯ ಹೇಳಿಕೆಯು ಭಿನ್ನವಾಗಿರುವುದರಿಂದ ಯಾವುದು ಸರಿ? ತಪ್ಪು? ಎಂಬ ಗೊಂದಲು ಮೂಡುತ್ತಿದೆ.

ಅರುಣಾ ಕುಮಾರಿ ಹಾಗೂ ದರ್ಶನ್ ಸ್ನೆಹಿತ ಹರ್ಷ ‌ಮೆಲಂಟಾ ಜತೆಗಿನ ಮೊಬೈಲ್ ಸಂಭಾಷಣೆ ಸದ್ಯ ವೈರಲ್​ ಆಗಿದೆ. ಅದರಲ್ಲಿ ಮಲ್ಲೇಶ್ ಎಂಬುವರು ನನ್ನನ್ನು ಕಳುಹಿಸಿದ್ರು ಎಂದು ಅರುಣಾ ಕುಮಾರಿ ಹೇಳಿಕೊಂಡಿದ್ದಾರೆ. ಉಮಾಪತಿಯನ್ನು ನಾನೇ ಸಂಪರ್ಕ ಮಾಡಿದ್ದೆ. ಅವರು ದರ್ಶನ್ ಸ್ನೇಹಿತರು ಎನ್ನುವ ಕಾರಣಕ್ಕೆ ಭೇಟಿ ಮಾಡಿದ್ದೆ. ಅವರ ಮೂಲಕ ದರ್ಶನ್ ಭೇಟಿಯಾಗಬಹುದು ಎಂಬ ಕಾರಣಕ್ಕೆ ಸಂಪರ್ಕ ಮಾಡಿದೆ. ಉಮಾಪತಿ ಸಹೋದರ ದೀಪು ಕೂಡ ನನಗೆ ಗೊತ್ತಿಲ್ಲ ಎಂದು ಅರುಣಾ ಕುಮಾರಿ ಹೇಳಿರುವುದು ಆಡಿಯೋದಲ್ಲಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img