Friday, July 23, 2021
Homeಸಿನಿಮಾಮಗಳ ಜೊತೆ ವಿರುಷ್ಕಾ ದಂಪತಿಯ ಪಿಕ್​ನಿಕ್!

ಇದೀಗ ಬಂದ ಸುದ್ದಿ

ಮಗಳ ಜೊತೆ ವಿರುಷ್ಕಾ ದಂಪತಿಯ ಪಿಕ್​ನಿಕ್!

ಮುಂಬೈ : ಬಾಲಿವುಡ್ ನಟಿ ಅನುಷ್ಕಾ ಶರ್ಮ ಮತ್ತು ಕ್ರಿಕೆಟಿಗ ವಿರಾಟ್ ಕೋಹ್ಲಿ ಅವರ ಪುಟ್ಟ ಮಗಳು ವಮಿಕಾಗೆ 6 ತಿಂಗಳು ಪೂರೈಸಿದೆ. ಕಳೆದ ಜನವರಿ 11 ರಂದು ಜನಿಸಿದ ಬೇಬಿ ವಮಿಕಾಳ 6 ನೇ ತಿಂಗಳ ಹುಟ್ಟಿದಹಬ್ಬವನ್ನು ವಿರುಷ್ಕಾ ದಂಪತಿಯು, ಇಂಗ್ಲೆಂಡಿನ ಪಾರ್ಕೊಂದಕ್ಕೆ ಪಿಕ್​ನಿಕ್​ ಕರೆದುಕೊಂಡು ಹೋಗಿ ಆಚರಿಸಿದ್ದಾರೆ.

ಮಗುವಿನೊಂದಿಗೆ ಅನುಷ್ಕಾ ಮತ್ತು ವಿರಾಟ್​ ಸುಂದರ ಕ್ಷಣಗಳನ್ನು ಕಳೆಯುತ್ತಿರುವ ಝಲಕ್ ನೀಡುವ ಚಿತ್ರಗಳನ್ನು ಅನುಷ್ಕಾ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ‘ಅವಳ ಒಂದು ನಗೆ ನಮ್ಮ ಸುತ್ತಲ ಜಗತ್ತನ್ನು ಬದಲಾಯಿಸಬಲ್ಲದು!’ ಎಂದು ಟಿಪ್ಪಣಿ ಬರೆದಿರುವ ಅನುಷ್ಕಾ, ‘ಹ್ಯಾಪಿ 6 ಮಂತ್ಸ್​ ಟು ಅಸ್ ತ್ರೀ!’ ಎಂದಿದ್ದಾರೆ.

ಜೂನ್​ನಲ್ಲಿ ವರ್ಲ್ಡ್​ ಚಾಂಪಿಯನ್​ಶಿಪ್ ಕ್ರಿಕೆಟ್ ಪಂದ್ಯಾವಳಿಗಾಗಿ ಇಂಗ್ಲೆಂಡಿಗೆ ಹೋಗಬೇಕಾದರೆ, ಪತ್ನಿ ಮತ್ತು ಪುತ್ರಿಯನ್ನೂ ಕೊಹ್ಲಿ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯಕ್ಕೆ, ಸಾಮಾಜಿಕ ಮಾಧ್ಯಮದಲ್ಲಿ ಮಗುವಿನ ಮುಖವನ್ನು ಜಾಹೀರುಗೊಳಿಸದಿರುವ ನಿರ್ಧಾರವನ್ನು ವಿರುಷ್ಕಾ ದಂಪತಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img