Friday, July 30, 2021
Homeಸುದ್ದಿ ಜಾಲಸಿಡಿಲಿಗೆ 61 ಮಂದಿ ಬಲಿ

ಇದೀಗ ಬಂದ ಸುದ್ದಿ

ಸಿಡಿಲಿಗೆ 61 ಮಂದಿ ಬಲಿ

ಜೈಪುರ್‌(ರಾಜಸ್ಥಾನ): ಉತ್ತರ ಭಾರತದಲ್ಲಿ ವರುಣನ ಆರ್ಭಟ ಆರಂಭವಾಗಿದೆ. ರಾಜಸ್ಥಾನ ಹಾಗೂ ಉತ್ತರ ಪ್ರದೇಶದಲ್ಲಿ ನಿನ್ನೆ ಒಂದೇ ದಿನ ಸಿಡಿಲಿಗೆ 61 ಮಂದಿ ಬಲಿಯಾಗಿದ್ದಾರೆ. ಹಲವರು ಗಾಯಗೊಂಡಿರುವ ವರದಿಯಾಗಿದೆ.

ಉತ್ತರ ಪ್ರದೇಶದ ಕೌಶಂಬಿ, ಫತೇಪುರ್‌ ಮತ್ತು ಫಿರೋಜಾಬಾದ್‌ ಜಿಲ್ಲೆಗಳಲ್ಲಿ ಸಿಡಿಲಿಗೆ ನಿನ್ನೆ 41 ಮಂದಿ ಸಾವನ್ನಪ್ಪಿದರು. ಸಿಎಂ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಕೌಶಂಬಿ ಜಿಲ್ಲೆಯಲ್ಲಿ ಮೃತಪಟ್ಟವರನ್ನು ರುಕ್ಮಾ(12), ಮೂರತ್‌ ಧ್ವಜ್‌ (50), ರಾಚಮಂದ್ರ (32) ಹಾಗೂ 15 ವರ್ಷದ ಮಯಾಂಕ್‌ ಎಂದು ಗುರುತಿಸಲಾಗಿದೆ. ಮುರ್ಹಿಯಾ ಡೋಲಿ ಗ್ರಾಮದ ರುಕ್ಮಾ ಮತ್ತು ಮಯಾಂಗ್‌ ಸಿಂಗ್‌ ಗದ್ದೆಯಲ್ಲಿ ಕೆಲಸ ಸೇರಿದಂತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾಗ ಮಳೆ ಆರಂಭವಾಗಿದೆ. ಈ ವೇಳೆ ಮರಗಳ ಕೆಳಗಡೆ ಆಶ್ರಯ ಪಡೆದಿದ್ದಾಗ ಬಂದ ಸಿಡಿಲಿನಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img