Friday, July 30, 2021
Homeಸಿನಿಮಾಹುಟ್ಟುಹಬ್ಬದ ಸಂಭ್ರಮದಲ್ಲಿ ಶಿವಣ್ಣ

ಇದೀಗ ಬಂದ ಸುದ್ದಿ

ಹುಟ್ಟುಹಬ್ಬದ ಸಂಭ್ರಮದಲ್ಲಿ ಶಿವಣ್ಣ

ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಆದರೆ ಈ ವರ್ಷವೂ ಕೊರೊನಾ ಆತಂಕದ ಛಾಯೆ ಶಿವರಾಜಕುಮಾರ್‌ ಹುಟ್ಟುಹಬ್ಬದ ಸಂಭ್ರಮವನ್ನು ಮಂಕಾಗಿಸಿದೆ.

ಕಳೆದ ವರ್ಷ ಕೋವಿಡ್‌ ಮೊದಲ ಅಲೆಯ ಆತಂಕದಿಂದ ಶಿವಣ್ಣ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಇನ್ನು ಈ ವರ್ಷವೂ ಕೊರೊನಾ ಎರಡನೇ ಅಲೆಯ ಆತಂಕ ಮುಂದುವರೆದಿರುವುದರಿಂದ, ಈ ಬಾರಿಯೂ ಅಭಿಮಾನಿಗಳು ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸದಂತೆ ಶಿವರಾಜಕುಮಾರ್‌ ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಹೀಗಾಗಿ ಶಿವಣ್ಣ ಮನವಿಯಂತೆ ಅಭಿಮಾನಿಗಳು ಸಾಮಾಜಿಕಕಾರ್ಯಗಳ ಮೂಲಕ ಸರಳವಾಗಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಲು ಸಿದ್ಧತೆ ಮಾಡಿ ಕೊಂಡಿದ್ದಾರೆ.

ಇನ್ನು ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಬರ್ತ್‌ಡೇ ಪ್ರಯುಕ್ತ ನಟನೆಯ 123ನೇ ಸಿನಿಮಾದ ಫ‌ಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಔಟ್‌ ಆಯಂಡ್‌ ಔಟ್‌ ಆಯಕ್ಷನ್‌ ಲುಕ್‌ನಲ್ಲಿ ಶಿವರಾಜಕುಮಾರ್‌ ಕಾಣಿಸಿಕೊಂಡಿದ್ದು, ಚಿತ್ರದ ಫ‌ಸ್ಟ್‌ಲುಕ್‌ ರಿಲೀಸ್‌ ಅಭಿಮಾನಿಗಳಿಗೆ ಚಿತ್ರದ ಮೇಲೆ ಕುತೂಹಲ ಹೆಚ್ಚಿಸಿದೆ. ಈ ಚಿತ್ರದ ಟೈಟಲ್‌ ಇಂದು (ಜುಲೈ12) ಬಿಡುಗಡೆಯಾಗಲಿದೆ. ಈ ಚಿತ್ರವನ್ನು ವಿಜಯ್‌ ಮಿಲ್ಟನ್‌ ನಿರ್ದೇಶಿಸುತ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img