Friday, July 23, 2021
Homeಸುದ್ದಿ ಜಾಲಮೈಲಾರಲಿಂಗೇಶ್ವರ ದರ್ಶನ ಪಡೆದ ರವಿ. ಡಿ. ಚನ್ನಣ್ಣವರ್

ಇದೀಗ ಬಂದ ಸುದ್ದಿ

ಮೈಲಾರಲಿಂಗೇಶ್ವರ ದರ್ಶನ ಪಡೆದ ರವಿ. ಡಿ. ಚನ್ನಣ್ಣವರ್

ವಿಜಯನಗರ: ಸಿಐಡಿ ಎಸ್‌ಪಿಯಾಗಿ ವರ್ಗಾವಣೆಗೊಂಡಿರುವ ರವಿ. ಡಿ. ಚನ್ನಣ್ಣವರ್ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿ ಅಶೋಕ್ ಮಿರ್ಜಿ ಭಾನುವಾರ ಮೈಲಾರಲಿಂಗೇಶ್ವರ ದರ್ಶನ ಪಡೆದರು.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಶ್ರೀಕ್ಷೇತ್ರ ಮೈಲಾರಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿ ಅಶೋಕ್ ಮಿರ್ಜಿ ಮತ್ತು ಐಪಿಎಸ್ ಅಧಿಕಾರಿ ರವಿ. ಡಿ. ಚನ್ನಣ್ಣವರ್ ಭಾನುವಾರ ಸಂಜೆ ಭೇಟಿ ನೀಡಿ ಮೈಲಾರಲಿಂಗೇಶ್ವರನಿಗೆ ಹೂವು, ಹಣ್ಣು, ಕಾಯಿ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.

ಈ ವೇಳೆ ಧರ್ಮಧಿಕಾರಿ ಶ್ರೀಗುರು ವೆಂಕಟಪ್ಪ ಒಡೆಯರ್ ಸಿಐಡಿ ಎಸ್ಪಿ ರವಿ. ಡಿ. ಚೆನ್ನಣ್ಣವರ್‌ರನ್ನು ಸ್ವಾಗತಿಸಿ ಮಾತನಾಡಿ, ಮೈಲಾರ ಕ್ಷೇತ್ರದ ಮಹಿಮೆಯನ್ನು ತಿಳಿಸಿದರು. “ನೀವು ಇನ್ನೂ ಉನ್ನತ ಹುದ್ದೆಗಳನ್ನು ಅಲಂಕರಿಸಿ ಜನರ ಸೇವೆಯನ್ನು ಮಾಡಿ ಮತ್ತು ನೂತನ ವಿಜಯನಗರ ಜಿಲ್ಲೆಗೆ ಎಸ್ಪಿ ಆಗಿ ಬಂದು ನಮ್ಮ ಜನರ ಸೇವೆ ಮಾಡಿ,” ಎಂದು ಆಶೀರ್ವಾದ ಮಾಡಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img