Sunday, August 1, 2021
Homeಬೆಂಗಳೂರುಅಂಬರೀಶ್ ಫ್ಯಾಮಿಲಿಗಾಗಿ ಪ್ರಾಣ ಕೊಡೋಕು ಸಿದ್ಧ:ರಾಕ್​ಲೈನ್

ಇದೀಗ ಬಂದ ಸುದ್ದಿ

ಅಂಬರೀಶ್ ಫ್ಯಾಮಿಲಿಗಾಗಿ ಪ್ರಾಣ ಕೊಡೋಕು ಸಿದ್ಧ:ರಾಕ್​ಲೈನ್

ಬೆಂಗಳೂರು: ಸುಮಲತಾ ಅಂಬರೀಶ್ ಬೆನ್ನಿಗೆ ನಿಂತಿರುವ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಮನೆ ಮೇಲೆ ಭಾನುವಾರ ತಡ ರಾತ್ರಿ ಮದ್ಯದ ಬಾಟಲ್​ ಮತ್ತು ಕಲ್ಲುಗಳನ್ನು ಎಸೆದು ದಾಳಿ ನಡೆಸಲಾಗಿದೆ. ಈ ವಿಚಾರವಾಗಿ ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದು, ಈ ರೀತಿ ಮಾಡಿ ನನ್ನನ್ನು ಹೆದರಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇಂತಹ ಟೈಮಲ್ಲಿ ನನ್ನ ಹೆದುರಿಸಬೇಕು ಅಂದುಕೊಂಡರೆ ಅದು ಆಗಲ್ಲ. ಯಾರೋ ದುಷ್ಕರ್ಮಿಗಳು ಬಂದು ನಮ್ಮನೆಗೆ ಕಲ್ಲು ಎಸೆದಿದ್ದಾರೆ. ಏನೆ ಆದರೂ ನಾನು ಅಂಬರೀಶ್ ಕುಟುಂಬಕ್ಕೆ ಸಪೋರ್ಟ್ ಮಾಡ್ತೀನಿ. ಈ ರೀತಿ ಗಲಾಟೆಗಳನ್ನ ಮಾಡಿಸಿ ನನ್ನ ಹೆದುರಿಸ್ತೀನಿ ಅಂದುಕೊಂಡರೆ ಅದು ಸಾಧ್ಯವಿಲ್ಲ. ಅಂಬರೀಶ್ ಕುಟುಂಬದ ಹಿಂದೆ ನಾನು ಯಾವಾಗ್ಲೂ‌ ಇರ್ತೇನೆ. ಅಂಬರೀಶ್ ಕುಟುಂಬಕ್ಕಾಗಿ ಎಲ್ಲಾ ತ್ಯಾಗ ಮಡೋಕು ಸಿದ್ಧ. ಅವರ ಫ್ಯಾಮಿಲಿಗಾಗಿ ನನ್ನ ಪ್ರಾಣ ಕೊಡೋಕು ಸಿದ್ಧ. ಹಾಗಂತ ನಾನು ಹೆದರಿಕೊಂಡು ಹಿಂಜರಿಯಲ್ಲ. ನನಗೆ ಅಂಬರೀಶ್ ಕುಟುಂಬದ ಜತೆ ಒಳ್ಳೆ ಸ್ನೇಹ ಇದೆ. ಇಲ್ಲೀಗಲ್ ಮೈನಿಂಗ್ ವಿಷಯಕ್ಕೆ ಸುಮಲತಾ ಅವರು ಧ್ವನಿ ಎತ್ತಿದ್ದಾರೆ. ರಾಜಕೀಯವಾಗಿ ನಾನು ಮಾತನಾಡೋಕೆ ಹೋಗಲ್ಲ. ಮಂಡ್ಯಕ್ಕೆ ನಾನು ಬರಬಾರದು ಅಂತ ಹೇಳೋಕೆ ಯಾರಿಗೂ ಹಕ್ಕಿಲ್ಲ. ನಾನು ಸುಮಲತಾ ಬೆನ್ನಿಗೆ ಸದಾ ನಿಂತಿರ್ತೀನಿ ಎಂದು ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img