Friday, July 23, 2021
Homeಸುದ್ದಿ ಜಾಲಕ್ಯೂಬಾದಲ್ಲಿ ಆಹಾರದ ಕೊರತೆ, ಬೆಲೆ ಏರಿಕೆ ಖಂಡಿಸಿ ಬೀದಿಗಿಳಿದ ಜನ

ಇದೀಗ ಬಂದ ಸುದ್ದಿ

ಕ್ಯೂಬಾದಲ್ಲಿ ಆಹಾರದ ಕೊರತೆ, ಬೆಲೆ ಏರಿಕೆ ಖಂಡಿಸಿ ಬೀದಿಗಿಳಿದ ಜನ

ಹವಾನಾ : ಇಡೀ ವಿಶ್ವವನ್ನು ತಲ್ಲಣಗೊಳಿಸಿರುವ ಕೋವಿಡ್‌, ಹಲವು ರೂಪಾಂತರಿಗಳ ಮೂಲಕ ಜನರನ್ನ ಹಿಂಡಿ ಹಿಪ್ಪೆ ಮಾಡುತ್ತಿದೆ. ಆರ್ಥಿಕವಾಗಿ ಹಲವಾರು ದೇಶಗಳನ್ನು ಪಾತಾಳಕ್ಕೆ ಕುಸಿಯುವಂತೆ ಮಾಡಿರುವ ವೈರಸ್‌, ಅದೆಷ್ಟೋ ಬಡ ರಾಷ್ಟ್ರಗಳಲ್ಲಿ ಒಪ್ಪೊತ್ತಿನ ಊಟಕ್ಕೂ ಪರದಾಡುವಂತೆ ಮಾಡಿದೆ. ಇತ್ತ ಕ್ಯೂಬಾದಲ್ಲಿ ಬೆಲೆ ಏರಿಕೆ ಹಾಗೂ ಆಹಾರ ಕೊರತೆ ಖಂಡಿಸಿ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.

ಕ್ಯೂಬಾದ ರಾಜಧಾನಿ ಹವಾನಾದಲ್ಲಿ ನಿನ್ನೆ ಯುವ ಜನತೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇದರಿಂದ ಅಲ್ಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ, ಕೆಲ ಗಂಟೆಗಳ ಕಾಲ ಸವಾರರು ರಸ್ತೆಯಲ್ಲೇ ಕಾಲ ಕಳೆಯುವಂತಾಯಿತು. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕೆಲ ಪ್ರತಿಭಟನಾಕಾರರು ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿ ಆಕ್ರೋಶವನ್ನು ಹೊರ ಹಾಕಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img