Sunday, August 1, 2021
Homeಸಿನಿಮಾರಾಕ್ ​ಲೈನ್​ ವೆಂಕಟೇಶ್​ ನಿವಾಸದ ಮೇಲೆ ಮದ್ಯದ ಬಾಟಲ್ ಎಸೆತ

ಇದೀಗ ಬಂದ ಸುದ್ದಿ

ರಾಕ್ ​ಲೈನ್​ ವೆಂಕಟೇಶ್​ ನಿವಾಸದ ಮೇಲೆ ಮದ್ಯದ ಬಾಟಲ್ ಎಸೆತ

ಎರಡು ದಿನಗಳ ಹಿಂದಷ್ಟೇ ನಿರ್ಮಾಪಕ ರಾಕ್​​ಲೈನ್​ ವೆಂಕಟೇಶ್​ ನಿವಾಸದ ಮೇಲೆ ಜೆಡಿಎಸ್​ ಕಾರ್ಯಕರ್ತರಿಂದ ಮುತ್ತಿಗೆ ಯತ್ನ ಬೆನ್ನಲ್ಲೆ ಇದೀಗ ಮತ್ತೊಂದು ಮಹತ್ವದ ಘಟನೆ ಸಂಭವಿಸಿದೆ.

ತಡರಾತ್ರಿ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಮಹಾಲಕ್ಷ್ಮೀ ಲೇ ಔಟ್​ನಲ್ಲಿರುವ ರಾಕ್​ಲೈನ್​ ನಿವಾಸದ ಮೇಲೆ ಬಿಯರ್​ ಬಾಟಲಿ ಹಾಗೂ ಕಲ್ಲು ಎಸೆದಿದ್ದಾರೆ.

ಮಧ್ಯರಾತ್ರಿ ಸುಮಾರಿಗೆ ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರಾಕ್​ಲೈನ್​ ನಿವಾಸದ ಎದುರು ಬಿಯರ್​ ಬಾಟಲಿ ಹಾಗೂ ಕಲ್ಲನ್ನು ಎಸೆದಿದ್ದಾರೆ. ಈ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇನ್ನು ಘಟನೆ ಸಂಬಂಧ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊನ್ನೆ ರಾಜಕೀಯ ಬೆಳವಣಿಗೆ ಬಳಿಕ ಇದೀಗ ಈ ಘಟನೆ ಸಂಭವಿಸಿದೆ. ನಾನು ಸುಮ್ಮನೇ ಇದ್ದರೂ ಸಹ ನನ್ನನ್ನ ಸುಖಾಸುಮ್ಮನೆ ಟಾರ್ಗೆಟ್​ ಮಾಡಲಾಗ್ತಿದೆ. ಇದು ಈ ಹಂತದವರೆಗೆ ಮುಂದುವರಿಯುತ್ತೆ ಎಂದುಕೊಂಡಿರಲಿಲ್ಲ. ನಾನು ಈ ಸಂಬಂಧ ಪೊಲೀಸ್​ ಠಾಣೆಗೆ ದೂರು ನೀಡಲಿದ್ದೇನೆ. ಸಿಸಿ ಟಿವಿಯಲ್ಲಿ ಸಂಪೂರ್ಣ ದೃಶ್ಯಾವಳಿ ಸೆರೆಯಾಗಿದೆ. ಇದನ್ನ ಪೊಲೀಸರಿಗೆ ನೀಡುವ ಮೂಲಕ ಆರೋಪಿ ಯಾರೆಂದು ಪತ್ತೆ ಹಚ್ಚುತ್ತೇವೆ ಎಂದು ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img