Thursday, July 29, 2021
Homeಜಿಲ್ಲೆಕೊಡಗುಕೊಡಗು ಅನ್​ಲಾಕ್​ ಆದರೂ ಪ್ರವಾಸಿಗರಿಗಿಲ್ಲ ಮೋಜಿನ ಭಾಗ್ಯ

ಇದೀಗ ಬಂದ ಸುದ್ದಿ

ಕೊಡಗು ಅನ್​ಲಾಕ್​ ಆದರೂ ಪ್ರವಾಸಿಗರಿಗಿಲ್ಲ ಮೋಜಿನ ಭಾಗ್ಯ

ಕೊಡಗು : ಇಷ್ಟು ದಿನ ಸಂಪೂರ್ಣ ಬಂದ್ ಆಗಿದ್ದ ಜಿಲ್ಲೆ ಇದೀಗ ಅನ್​ಲಾಕ್ ಆಗಿದೆ. ಆದರೆ, ಪ್ರವಾಸಿ ತಾಣಗಳತ್ತ ಬರುತ್ತಿರುವ ಪ್ರವಾಸಿಗರು ಬಂದ ದಾರಿಗೆ ಸುಂಕವಿಲ್ಲ‌ ಎಂಬಂತೆ ತಮ್ಮ‌ ಊರಿನತ್ತ ಮರಳುತ್ತಿದ್ದಾರೆ.

ಕೊಡಗಿನತ್ತ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ಇಷ್ಟು ದಿನ ಕೋವಿಡ್​ನಿಂದಾಗಿ ಮನೆಯಲ್ಲೇ ಕೂತು ಬೋರ್ ಆಗಿದ್ದ ಮಂದಿ ಕೊಡಗಿನತ್ತ ಬರುತ್ತಿದ್ದಾರೆ. ಕೊಡಗಿನ ಕಾವೇರಿ ನಿಸರ್ಗಧಾಮ, ಅಬ್ಬಿ ಫಾಲ್ಸ್ ಹೀಗೆ ನಾನಾ ಪ್ರವಾಸಿ ತಾಣಗಳಿಗೆ ಬರುತ್ತಿರುವ ಪ್ರವಾಸಿಗರು ಗೇಟ್ ಮುಂಭಾಗದಿಂದಲೇ ನೋ ಎಂಟ್ರಿ ಬೋರ್ಡ್‌ ನೋಡಿ ಹಿಂತಿರುಗುತ್ತಿದ್ದಾರೆ.

ಜಿಲ್ಲಾಡಳಿತದ ಈ ನಿರ್ಧಾರ ಒಂದಷ್ಟು ಮಂದಿಗೆ ಗೊಂದಲ ಉಂಟು ಮಾಡಿದೆ. ಜಿಲ್ಲಾಡಳಿತ ಈಗಾಗಲೇ ಪ್ರವಾಸಿಗರ ಆಗಮನಕ್ಕೆ ಅನುವು ಮಾಡಿ‌ ಕೊಟ್ಟಿರೋದ್ರಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಸುಮಾರು ಮೂರು ನಾಲ್ಕು ದಿನಗಳಿಗೆ ರೂಂ ಬುಕ್ಕಿಂಗ್ ಮಾಡಿರುವವರು ಕೂಡ ಒಂದೇ ದಿನಕ್ಕೆ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img