Friday, July 30, 2021
Homeಸುದ್ದಿ ಜಾಲಯುರೋ ಕಪ್ ಗೆದ್ದ ಇಟಲಿ

ಇದೀಗ ಬಂದ ಸುದ್ದಿ

ಯುರೋ ಕಪ್ ಗೆದ್ದ ಇಟಲಿ

ಯುಇಎಫ್‌ಎ ಯುರೋ ಕಪ್‌ನ ಫೈನಲ್​ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡವನ್ನು ಸೋಲಿಸುವ ಮೂಲಕ ಇಟಲಿ ಚಾಂಪಿಯನ್ ಆಗಿದೆ. ಪೆನಾಲ್ಟಿ ಶೂಟೌಟ್ ತನಕ ನಡೆದ ಪಂದ್ಯದಲ್ಲಿ ಇಟಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಯುರೋ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 1968 ರ ನಂತರ ಯುರೋ ಕಪ್‌ನಲ್ಲಿ ಇಟಲಿ ಮೊದಲ ಪ್ರಶಸ್ತಿ ಗೆದ್ದಿದೆ. 55 ವರ್ಷಗಳ ನಂತರ ಇಂಗ್ಲೆಂಡ್ ಫೈನಲ್ ತಲುಪಿದ್ದು, ಅವರ ಮೊದಲ ಯುರೋ ಕಪ್ ಪ್ರಶಸ್ತಿ ಗೆಲ್ಲುವ ಕನಸು ನುಚ್ಚು ಚೂರಾಯಿತು.

ಇದಕ್ಕೂ ಮೊದಲು, 90 ನಿಮಿಷಗಳ ಪಂದ್ಯದಲ್ಲಿ ಉಭಯ ತಂಡಗಳನ್ನು 1-1 ಗೋಲ್​ಗಳನ್ನು ಗಳಿಸಿ ಸಮವಾಗಿತ್ತು. ನಂತರ 6 ನಿಮಿಷಗಳ ಪೆನಾಲ್ಟಿ ಶೂಟೌಟ್​ ಸಮಯವನ್ನು ತೆಗೆದುಕೊಳ್ಳಲಾಯಿತು. ಪೆನಾಲ್ಟಿ ಶೂಟೌಟ್​ ಸಮಯದಲ್ಲಿ ಎರಡೂ ತಂಡಗಳಿಗೆ ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ, ನಂತರ 30 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಯಿತು. ನೀಡಿದ್ದ ಹೆಚ್ಚುವರಿ ಸಮಯದ ಆಟದಲ್ಲಿ ಎರಡೂ ತಂಡಗಳು ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ. ಹೆಚ್ಚುವರಿ ಸಮಯದಲ್ಲೂ ಪಂದ್ಯವನ್ನು ಸಮಗೊಳಿಸಿದ ನಂತರ, ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ನೀಡಲಾಯಿತು.

ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿ ಬಾಲ್​ನ್ನು ಐದರಲ್ಲಿ ಮೂರು ಬಾರಿ ಗೋಲ್ ಬಾರಿಸಿತು. ಇಂಗ್ಲಿಷ್ ಆಟಗಾರರು ಎರಡು ಗೋಲ್​ ಮಾತ್ರ ಗಳಿಸಿತು. ಇದಕ್ಕೂ ಮೊದಲು ಫೈನಲ್​ ಪಂದ್ಯದ ಆರಂಭ ರೋಚಕವಾಗಿತ್ತು. ಐತಿಹಾಸಿಕ ವೆಂಬ್ಲಿ ಕ್ರೀಡಾಂಗಣದಲ್ಲಿ ಪಂದ್ಯ ಪ್ರಾರಂಭವಾದ ಎರಡನೇ ನಿಮಿಷದಲ್ಲಿ ಲ್ಯೂಕ್ ಶಾ ಅದ್ಭುತ ಗೋಲು ಗಳಿಸಿ ಇಂಗ್ಲೆಂಡ್‌ಗೆ ಮುನ್ನಡೆ ನೀಡಿದರು. 1-0 ಮುನ್ನಡೆ ಸಾಧಿಸಿದರೂ, ಇಂಗ್ಲೆಂಡ್ ಪಂದ್ಯದುದ್ದಕ್ಕೂ ಆಟ ಸಡಿಲಗೊಳಿಸಲಿಲ್ಲ ಮತ್ತು ಆಕ್ರಮಣಕಾರಿ ಪ್ರದರ್ಶನ ತೋರಿತು. ಮೊದಲಾರ್ಧದ ಅಂತ್ಯದ ವೇಳೆಗೆ, ಇಂಗ್ಲೆಂಡ್ ಇಟಲಿ ವಿರುದ್ಧ 1-0 ಮುನ್ನಡೆ ಸಾಧಿಸಿತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img