Friday, July 23, 2021
Homeಸುದ್ದಿ ಜಾಲದರ್ಶನ್ ಸ್ನೇಹಿತರಿಂದ ನನಗೆ ಬೆದರಿಕೆ ಇದೆ:ನಿರ್ಮಾಪಕ ಉಮಾಪತಿ

ಇದೀಗ ಬಂದ ಸುದ್ದಿ

ದರ್ಶನ್ ಸ್ನೇಹಿತರಿಂದ ನನಗೆ ಬೆದರಿಕೆ ಇದೆ:ನಿರ್ಮಾಪಕ ಉಮಾಪತಿ

ನಟ ದರ್ಶನ್​ ಹೆಸರಿನಲ್ಲಿ ವಂಚನೆಗೆ ಯತ್ನ ಪ್ರಕರಣ ಸಂಬಂಧ ನಿರ್ಮಾಪಕ ಉಮಾಪತಿ ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ದರ್ಶನ್​ ಸ್ನೇಹಿತರಿಂದಲೇ ನನಗೆ ಬೆದರಿಕೆ ಇದೆ. ಹರ್ಷ, ಶರ್ಮ, ರಾಕೇಶ್​ರಿಂದ ನನಗೆ ಬೆದರಿಕೆ ಇದೆ. ದರ್ಶನ್​ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಚರ್ಚೆ ಮೂಲಕ ಇದನ್ನ ಬಗೆಹರಿಸಿಕೊಳ್ಳಲ್ಲ. ಕಾನೂನು ಮೂಲಕವೇ ಇದಕ್ಕೆ ಪರಿಹಾರ ಹುಡುಕುತ್ತೇವೆ ಎಂದು ಹೇಳಿದ್ರು.

ನಾನು ದರ್ಶನ್​ ಸರ್​ಗೆ ಬೆಲೆ ಕೊಟ್ಟು ಮಾತನಾಡುತ್ತೇನೆ. ನನ್ನ ಹಾಗೂ ದರ್ಶನ್​ ನಡುವೆ ಒಡನಾಟ ಚೆನ್ನಾಗಿಯೇ ಇದೆ. ನಾನು ದರ್ಶನ್​ರಿಗೆ ಅರುಣಾ ಕುಮಾರಿಯನ್ನ ಭೇಟಿ ಮಾಡಿಸಿಯೇ ಇಲ್ಲ. ಭಗವಂತ ನನಗೆ ಒಳ್ಳೆಯ ಜೀವನ ಕೊಟ್ಟಿದ್ದಾನೆ. ನಾನು ಅದರಂತೆಯೇ ಜೀವನ ನಡೆಸುತ್ತೇನೆ. ಈ ರೀತಿ ಮೋಸ ಮಾಡುವ ಅವಶ್ಯಕತೆ ನನಗಿಲ್ಲ ಎಂದು ಹೇಳಿದ್ರು.

ಪ್ರಕರಣದಲ್ಲಿ ನನ್ನನ್ನ ಯಾರೋ ಬೇಕೆಂತಲೇ ಸಿಲುಕಿಸುತ್ತಿದ್ದಾರೆ. ಆರೋಪಿಗಳೆಲ್ಲ ಬೆಂಗಳೂರಿನಲ್ಲೇ ಇದ್ದಾರೆ. ಪೊಲೀಸರ ತನಿಖೆಯಲ್ಲಿ ಎಲ್ಲವೂ ಬಯಲಾಗುತ್ತದೆ. ಜೂನ್​ ತಿಂಗಳಲ್ಲಿ ನಾನು ಅರುಣಾ ಹಾಗೂ ದರ್ಶನ್​ ಕಾನ್ಫರೆನ್ಸ್​ ಕಾಲ್​ನಲ್ಲಿ ಮಾತನಾಡಿದ್ದೇವೆ. ಜೂನ್​ ನಾಲ್ಕನೇ ವಾರ ಪೊಲೀಸರು ಠಾಣೆಗೆ ನನ್ನನ್ನ ಕರೆಸಿದ್ದರು. ಆಗ ಅದೇ ಠಾಣೆಯಲ್ಲಿ ಅರುಣಾ ಕುಮಾರಿ ಕೂಡ ಇದ್ದರು ಎಂದು ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img