Friday, July 23, 2021
Homeಜಿಲ್ಲೆಬೆಂಗಳೂರುಕೊರೊನಾ ನಿಯಮ ಉಲ್ಲಂಘಿಸಿದ ಮೆಟ್ರೋ ಪ್ರಯಾಣಿಕರ ಮೇಲೆ ದಂಡ

ಇದೀಗ ಬಂದ ಸುದ್ದಿ

ಕೊರೊನಾ ನಿಯಮ ಉಲ್ಲಂಘಿಸಿದ ಮೆಟ್ರೋ ಪ್ರಯಾಣಿಕರ ಮೇಲೆ ದಂಡ

ಬೆಂಗಳೂರು: ರಾಜ್ಯದಲ್ಲಿ ಲಾಕ್​ಡೌನ್​ಗೆ ರಿಲೀಫ್​ ನೀಡಲಾಗಿದೆಯೇ ಹೊರತು ಕೊರೊನಾ ಸೋಂಕಿಗಲ್ಲ. ಆದರೆ ಮೆಟ್ರೋದಲ್ಲಿ ಕೋವಿಡ್​ ಮಾರ್ಗನೂಚಿಗಳನ್ನು ಪಾಲಿಸದ ಪ್ರಯಾಣಿಕರಿಗೆ BMRCL ಅಧಿಕಾರಿಗಳು ದಂಡ ಜಡಿದಿದ್ದಾರೆ.

ಸರ್ಕಾರ ಅನ್​ಲಾಕ್​ ಘೋಷಣೆ ಮಾಡಿದ್ದು, ಕೋವಿಡ್​ ನಿಯಮ ಪಾಲನೆಯನ್ನು ಕಡ್ಡಾಯಗೊಳಿಸಿದೆ. ಆದರೆ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರು ರೈಲಿನ ಒಳಗೆ ಹಾಗೂ ನಿಲ್ದಾಣಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಿದ್ದರು. ಇದನ್ನು ಗಮನಿಸಿ ಬಿಎಂಆರ್​​ಸಿಎಲ್ ಅಧಿಕಾರಿಗಳು ದಂಡ ವಿಧಿಸಲು ಮುಂದಾಗಿದ್ದರು.

ಮೆಟ್ರೋ ಓಡಾಟದಲ್ಲಿ ಫೇಸ್​​ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹೀಗೆ ಮೆಟ್ರೋ ನಿಲ್ದಾಣ ಹಾಗೂ ರೈಲಿನಲ್ಲಿ ಸರಿಯಾಗಿ ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸಿ ದವರಿಗೆ 250ರೂ. ದಂಡ ಹಾಕಲಾಗುತ್ತಿದೆ. ಇತ್ತ ನಿಯಮ ಉಲ್ಲಂಘಿಸುವವರ ಮೇಲೆ ಕಣ್ಣಿಡಲು ವಿಶೇಷ ತಂಡ ರಚನೆ ಮಾಡಿದೆ. ಕಳೆದ ಒಂದು ವಾರದಿಂದ ಪ್ರಯಾಣಿಕರ ಮೇಲೆ ದಂಡಾಸ್ತ್ರ ಪ್ರಯೋಗ ಮಾಡಲಾಗುತ್ತಿದ್ದು, ಒಟ್ಟು 1,77,250 ರೂ. ವಸೂಲಿ ಮಾಡಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img