Friday, July 30, 2021
Homeಜಿಲ್ಲೆಬೆಂಗಳೂರುಬಿಬಿಎಂಪಿ ಟೌನ್ ಪ್ಲಾನಿಂಗ್ ವಿಭಾಗದಲ್ಲಿ ಕುರ್ಚಿಗಾಗಿ ಕಿತ್ತಾಟ

ಇದೀಗ ಬಂದ ಸುದ್ದಿ

ಬಿಬಿಎಂಪಿ ಟೌನ್ ಪ್ಲಾನಿಂಗ್ ವಿಭಾಗದಲ್ಲಿ ಕುರ್ಚಿಗಾಗಿ ಕಿತ್ತಾಟ

ಬೆಂಗಳೂರು: ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳು ಕುರ್ಚಿಗಾಗಿ ಕಿತ್ತಾಡುವುದು ಸಾಮಾನ್ಯ. ಆದರೀಗ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕ ಹುದ್ದೆಗೆ ಅಧಿಕಾರಿಗಳ ನಡುವೆ ಸಂಘರ್ಷ ಆರಂಭವಾಗಿದೆ.

ಉತ್ತರ ವಿಭಾಗದ ಜಂಟಿ ನಿರ್ದೇಶಕ ಹುದ್ದೆಗೆ ಬಿ.ಮಂಜೇಶ್ ಹಾಗೂ ವೆಂಕಟ ದುರ್ಗಾಪ್ರಸಾದ್ ಎಂಬ ಇಬ್ಬರು ಅಧಿಕಾರಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಕೋರ್ಟ್ ಆದೇಶ ಇಲ್ಲದಿದ್ರೂ ಸ್ಟೇ ಇದ್ದರೂ ದುರ್ಗಾಪ್ರಸಾದ್ ಎಂಬುವವರು ಅಧಿಕಾರಕ್ಕೆ ಬಂದಿದ್ದಾರೆ. ಈವರೆಗೆ ಅಧಿಕಾರದಲ್ಲಿದ್ದ ಮಂಜೇಶ್ ಜಾಗಕ್ಕೆ ದುರ್ಗಾಪ್ರಸಾದ್ ಏಕಾಏಕಿಯಾಗಿ ಬಂದು ಕುಳಿತಿದ್ದಾರೆ. ಕಾನೂನುಬದ್ಧವಾಗಿ ಹುದ್ದೆ ಅಲಂಕರಿಸಿರುವುದಾಗಿ ದುರ್ಗಾ ಪ್ರಸಾದ್ ಹೇಳಿಕೆ ನೀಡಿದ್ದಾರೆ. ಆದರೆ ಅಧಿಕಾರ ಸ್ವೀಕರಿಸಲು ಸರ್ಕಾರದಿಂದ ಇನ್ನೂ ಆದೇಶವಾಗಿಲ್ಲ ಎಂದು ಮಂಜೇಶ್ ವಾದಿಸುತ್ತಿದ್ದಾರೆ.

ಈವರೆಗೆ ಜೆಡಿ ಹುದ್ದೆಯಲ್ಲಿದ್ದ ಮಂಜೇಶ್ ಊಟಕ್ಕೆ ಹೋದ ಸಮಯದಲ್ಲಿ ವೆಂಕಟ ದುರ್ಗಾ ಪ್ರಸಾದ್ ಏಕಾಏಕಿ ಚೇರ್​ನಲ್ಲಿ ಬಂದು ಕುಳಿತು ನನ್ನ ಕರ್ತವ್ಯ ಇಲ್ಲೇ, ಏನೇ ಇದ್ದರೂ ಆಯುಕ್ತರನ್ನೇ ಕೇಳಿ ಎಂದು ಹೇಳುತ್ತಿದ್ದಾರೆ. ಇದು ಆಡಳಿತಾತ್ಮಕ ವಿಚಾರವಾಗಿರುವುದರಿಂದ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ ಎನ್ನಲಾಗುತ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img