Friday, July 30, 2021
Homeಜಿಲ್ಲೆಬೆಂಗಳೂರುಸಾವಿನಲ್ಲೂ ಸಾರ್ಥಕತೆ ಮೆರೆದ ಬಳ್ಳಾರಿ ಮಹಿಳೆ

ಇದೀಗ ಬಂದ ಸುದ್ದಿ

ಸಾವಿನಲ್ಲೂ ಸಾರ್ಥಕತೆ ಮೆರೆದ ಬಳ್ಳಾರಿ ಮಹಿಳೆ

ಬೆಂಗಳೂರು: ನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವಿಗೀಡಾದ ಮಹಿಳೆಯ ಮೆದುಳು ನಿಷ್ಕ್ರಿಯಗೊಂಡಿದ್ದು, ಕುಟುಂಬದವರು ಅಂಗಾಂಗಳ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದರು.

ನಗರದಲ್ಲಿ ಬೈಕ್ ಅಪಘಾತದಲ್ಲಿ ಸುಮಾರು 36 ವರ್ಷದ ಮಹಿಳೆಯ ತಲೆಗೆ ತೀವ್ರವಾಗಿ ಗಾಯವಾಗಿತ್ತು. ಕೂಡಲೇ ಆಕೆಯನ್ನು ಬನ್ನೇರುಘಟ್ಟ ಅಪೊಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಈ ಘಟನೆಯಲ್ಲಿ ಮಹಿಳೆಯ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿದ್ದು ಆಕೆಯ ಅಂಗಾಂಗ ದಾನಕ್ಕೆ ಕುಟುಂಬದವರು ಮುಂದಾಗಿದ್ದರು. ಹೀಗಾಗಿ ಎಂ.ಎಸ್ ರಾಮಯ್ಯ ಹಾರ್ಟ್ ಸೆಂಟರ್‌ಗೆ ಅಂಗಾಂಗಗಳನ್ನು ರವಾನೆ ಮಾಡಲಾಗಿತ್ತು.

ಈ ಮಹಿಳೆಯ ಹೃದಯವನ್ನು ಆಂಧ್ರದ 38 ವರ್ಷದ ಮಹಿಳೆಗೆ ವೈದ್ಯರು ಹೃದಯ ಕಸಿ ಮಾಡಲಾಗಿದೆ. ಈ ಮೂಲಕ ಎಂಎಸ್ ರಾಮಯ್ಯ ಹಾರ್ಟ್ ಸೆಂಟರ್ 35ನೇ ಹೃದಯ ಕಸಿ‌ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img