Thursday, July 29, 2021
Homeಜಿಲ್ಲೆಮೈಸೂರು25 ಕೋಟಿ ವಂಚನೆ ಕೇಸ್​ಗೆ ದಚ್ಚು ಕಿಡಿ

ಇದೀಗ ಬಂದ ಸುದ್ದಿ

25 ಕೋಟಿ ವಂಚನೆ ಕೇಸ್​ಗೆ ದಚ್ಚು ಕಿಡಿ

ಮೈಸೂರು: ತಮ್ಮ ವಿರುದ್ಧ ನಡೆದಿದ್ದ ಸಂಚಿನ ಕುರಿತು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಗರಂ ಆಗಿದ್ದಾರೆ. ತಮ್ಮ ಹೆಸರಲ್ಲಿ ನಡೆಯುತ್ತಿದ್ದ 25 ಕೋಟಿ ರೂಪಾಯಿ ವಂಚನೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ವತಃ ಅವರೇ ಇಂದು ಸ್ಪಷ್ಟನೆ ನೀಡಿದ್ದು, ಪ್ರಕರಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಹರ್ಷನಿಗು ನನಗೂ ಹಳೆ ಪರಿಚಯ. ರಾಕೇಶ್ ಶರ್ಮಾ, ನಾಗು ನಾವೆಲ್ಲ ಒಟ್ಟಿಗೆ ಇರ್ತಿದ್ವಿ. ಜೂನ್​ 6 ರಂದು ನಿರ್ಮಾಪಕ ಉಮಾಪತಿ ನನಗೆ ಕಾಲ್​ ಮಾಡಿ 25 ಕೋಟಿ ರೂ ಸಾಲಕ್ಕೆ ನೀವು ಶ್ಯೂರಿಟಿ ಹಾಕಿದ್ದೀರಾ ಎಂದು ಪ್ರಶ್ನಿಸಿದ್ರು, ಏನು ಎತ್ತ ಅಂತಾ ವಿಚಾರಿಸಿದೆ. ಅವರು ಮತ್ತೇನು ಪ್ರತಿಕ್ರಿಯಿಸಲಿಲ್ಲ ಎಂದರು.

ಜೂನ್​ 16 ರಂದು ಅರುಣಾ ಕುಮಾರಿಯವರನ್ನು ಉಮಾಪತಿ ಮನೆಗೆ ಕರೆದುಕೊಂಡು ಬಂದ್ರು. ಮನೆಗೆ ಬರುತ್ತಿದ್ದಂತೆಯೇ ಹರ್ಷ ಮಲಾಂಟಾ ಹಾಗೂ ಅವರ ಪತ್ನಿ ಊರ್ವಶಿ, ನನ್ನ ಮತ್ತೊಬ್ಬ ಸ್ನೇಹಿತ ವಿನಯ್ ಹಾಗೂ ಅವರ ಪತ್ನಿ ಹೆಸ್ರನ್ನು ಹೇಳಿದ್ರು. ಇಷ್ಟೆಲ್ಲಾ ಕೇಳಿದ ಮೇಲೆ ಅವರ ಮೇಲೆ ಒಂದು ರೀತಿಯ ನಂಬಿಕೆ ಬಂತು. ಅರುಣಾ ಆಗ ದಾಖಲೆಗಳನ್ನೆಲ್ಲ ತೋರಿಸಿದ್ರು. ಅದ್ರಲ್ಲಿ, ನನ್ನ ಆಧಾರ್​ ಕಾರ್ಡ್ ನಂಬರ್​ವೊಂದನ್ನು ಬಿಟ್ಟರೆ ಮತ್ತೇನೂ ಇರಲಿಲ್ಲ. ಜತೆಗೆ ನಾನು ಹುಟ್ಟಿದ ಜಾಗ, ಜಿಲ್ಲೆ ಎಲ್ಲವನ್ನೂ ಹೇಳಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img