Friday, July 30, 2021
Homeಸುದ್ದಿ ಜಾಲವಿಶ್ವ ಜನಸಂಖ್ಯಾ ದಿನ 2021

ಇದೀಗ ಬಂದ ಸುದ್ದಿ

ವಿಶ್ವ ಜನಸಂಖ್ಯಾ ದಿನ 2021

ಹೈದರಾಬಾದ್​: ಇಂದು(ಜುಲೈ 11) ವಿಶ್ವ ಜನಸಂಖ್ಯಾ ದಿನ. ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದು ಪ್ರಸ್ತುತ ದಿನಗಳಲ್ಲಿ ಅತಿ ದೊಡ್ಡ ಸವಾಲಾಗಿದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಚೀನಾ ಮೊದಲನೇ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ.

ಜಗತ್ತಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಕಡೆಗೆ ಗಮನ ಸೆಳೆಯುವುದು ಈ ದಿನದ ಆಚರಣೆಯ ಉದ್ದೇಶ. ಜನಸಂಖ್ಯಾ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಲು ಮತ್ತು ಇತರೆ ಏಜೆನ್ಸಿಗಳೊಂದಿಗೆ ಕೆಲಸ ಮಾಡಲು ವಿಶ್ವಸಂಸ್ಥೆ ಜನಸಂಖ್ಯಾ ನಿಧಿ (ಯುಎನ್‌ಎಫ್‌ಪಿಎ) ಸ್ಥಾಪಿಸಿದೆ.

ವಿಶ್ವ ಜನಸಂಖ್ಯಾ ದಿನವನ್ನು ವಿಶ್ವಸಂಸ್ಥೆಯು 1989 ರಲ್ಲಿ ಪ್ರಾರಂಭಿಸಿತು. ಆದರೆ, ಅಧಿಕೃತವಾಗಿ 1990 ಜುಲೈ 11 ರಂದು ಈ ನೀತಿಯನ್ನು ಜಾರಿಗೆ ತರಲಾಯಿತು. 1990 ರ ಡಿಸೆಂಬರ್​ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿ ವರ್ಷ ವಿಶ್ವ ಜನಸಂಖ್ಯಾ ದಿನ ಆಚರಿಸುವುದನ್ನು ನಿರ್ಧರಿಸಲಾಯಿತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img