Friday, July 23, 2021
Homeಕ್ರಿಕೆಟ್ಕ್ರೀಡೆಸಚಿನ್ ತೆಂಡೂಲ್ಕರ್​​ ಅಡುಗೆಗೆ ಅಭಿಮಾನಿಗಳು ಫಿದಾ

ಇದೀಗ ಬಂದ ಸುದ್ದಿ

ಸಚಿನ್ ತೆಂಡೂಲ್ಕರ್​​ ಅಡುಗೆಗೆ ಅಭಿಮಾನಿಗಳು ಫಿದಾ

ಟೀಮ್​ ಇಂಡಿಯಾದ ಮಾಜಿ ಆಟಗಾರ, ‘ಗಾಡ್​ ಆಫ್​ ಕ್ರಿಕೆಟ್’​​ ಸಚಿನ್​ ತೆಂಡಲ್ಕೂರ್​ ತಮ್ಮ ಅಭಿಮಾನಿಗಳನ್ನು ಹಲವು ವರ್ಷಗಳಿಂದ ಕ್ರಿಕೆಟ್​ ಮೂಲಕ ರಂಜಿಸಿದ್ದಾರೆ. ಈಗ ಮಾಸ್ಟರ್ ಬ್ಲಾಸ್ಟರ್ ತಮ್ಮ ಹೊಸ ಬಾಣಸಿಗನ ಅವತಾರದಿಂದ ಅಭಿಮಾನಿಗಳಿಗೆ ಮನರಂಜನೆ ನೀಡುವ ಪ್ರಯತ್ನದಲ್ಲಿದ್ದಾರೆ.

ಕ್ರಿಕೆಟ್‌ ಬದುಕಿನ ನಿವೃತ್ತಿಯ ನಂತರ ಸಚಿನ್‌, ಹೆಚ್ಚಿನ ಸಮಯವನ್ನು ತಮ್ಮ ಕುಟುಂಬ ಸದಸ್ಯರೊಡನೆ ಮುಂಬೈಯ ತಮ್ಮ ಮನೆಯಲ್ಲಿ ಆರಾಮಾಗಿ ಕಳೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ತಿದ್ದಾರೆ.

ಸಚಿನ್ ತೆಂಡೂಲ್ಕರ್​ ಈ ವಿಡಿಯೋದಲ್ಲಿ ಮಾತನಾಡುತ್ತಾ, “ನನಗೂ ಗೊತ್ತಿಲ್ಲ. ನಾನು ಯಾವ ಅಡುಗೆ ಮಾಡುತ್ತಿದ್ದೇನೆ ಎಂದು ನೀವೇ ಊಹಿಸಿ, ನೋಡೋಣ ಎಂದು ತಮ್ಮ ಅಭಿಮಾನಿಗಳಿಗೆ ಕೇಳಿದ್ದಾರೆ. ವಿಡಿಯೋ ಕೆಳಗಡೆ “ಸೇ ಹಾಯ್ ಟು ಯುವರ್‌ ಚೆಫ್ ಫಾರ್ ಟುಡೇ.. ಗೆಸ್ ವಾಟ್ಸ್ ಕುಕ್ಕಿಂಗ್” ಅಂತಾ ಬರೆದಿದ್ದಾರೆ. ಅಂದ ಹಾಗೆ ಸಚಿನ್‌ ಆಮ್ಲೆಟ್​ ಮಾಡಿದ್ದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img