Friday, July 30, 2021
Homeಬೆಂಗಳೂರುನನಗೆ ಯಾವ ಅಕ್ರಮ ಗಣಿಗಾರಿಕೆ ಬಗ್ಗೆನೂ ಗೊತ್ತಿಲ್ಲ:ಡಿ.ಕೆ. ಶಿ

ಇದೀಗ ಬಂದ ಸುದ್ದಿ

ನನಗೆ ಯಾವ ಅಕ್ರಮ ಗಣಿಗಾರಿಕೆ ಬಗ್ಗೆನೂ ಗೊತ್ತಿಲ್ಲ:ಡಿ.ಕೆ. ಶಿ

ಬೆಂಗಳೂರು : ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ನಾನು ಸಚಿವನಾಗಿದ್ದ ಸಂದರ್ಭ ಯಾವುದೇ ಮಾಹಿತಿಯನ್ನು ಯಾರೂ ನೀಡಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಮಂಡ್ಯದ ಅಕ್ರಮ ಗಣಿಗಾರಿಕೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಒಂದಷ್ಟು ದಿನ ಜಿಲ್ಲಾ ಮಂತ್ರಿ ಆಗಿದ್ದೆ, ನೀರಾವರಿ ಮಂತ್ರಿನೂ ಆಗಿದ್ದೆ. ಯಾರೂ ಬಂದು ಗಣಿಗಾರಿಕೆಯ ಸುದ್ದಿ ಮಾತನಾಡಿಲ್ಲ. ಎಲ್ಲೋ ಒಂದು 10 -15 ಕಿ.ಮೀ ಗೂ ಜಲ್ಲಿ ಕಲ್ಲಿಂದ ಏನು ವ್ಯತ್ಯಾಸ ಆಗುವುದಿಲ್ಲ. ಅದಕ್ಕೆಲ್ಲ ಬೌಂಡರಿ ಇದೆ, ಯಾರ್ಡ್ ಸ್ಟಿಕ್ ಇದೆ, ಲೆಕ್ಕಾಚಾರ ಇದೆ, ಗಣಿ ಇಲಾಖೆ ಇದೆ. ನೂರಾರು ಇಂಜಿನಿಯರ್​ಗಳು ಇದ್ದಾರೆ. ಅವರೆಲ್ಲ ನೋಡಿಕೊಳ್ಳುತ್ತಾರೆ ಎಂದರು.

ನಾವು ನಿಮ್ಮ ಜೊತೆ ಮಾತನಾಡಿ ಕೆಆರ್​ಎಸ್​ ಬಿರುಕು ಬಿಟ್ಟಿದೆ ಅಂತ ಜನರಲ್ಲಿ ಆತಂಕ ಮೂಡಿಸಿ ಚೀಪ್ ಪಾಪ್ಯುಲಾರಿಟಿ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಇದು ಅತ್ಯಂತ ಸೂಕ್ಷ ವಿಚಾರ, ಕೆಆರ್​​​ಎಸ್​ ಡ್ಯಾಂ ರಾಜ್ಯ, ರಾಷ್ಟ್ರದ ಆಸ್ತಿ. ಈ ಆಸ್ತಿ ಬಗ್ಗೆ ಜವಾಬ್ದಾರಿ ಸ್ಥಾನದಲ್ಲಿದ್ದು, ಸರಿಯಾಗಿ ಹೇಳಬೇಕು.

ನಮ್ಮ ಮನೆಯಲ್ಲಿ ಕೂಡ ಕೆಆರ್​ಎಸ್​ ಬಗ್ಗೆ ಗಾಬರಿ ಆಗ್ತಿದೆ ಎನ್ನುತ್ತಿದ್ದಾರೆ. ನಮಗೆಲ್ಲ ಗೊತ್ತಿದೆ, ಅದರ ಎಫೆಕ್ಟ್ ಏನು ಎಂದ ಅಂತ ಹೇಳಿದರು. ಗಣಿಗಾರಿಕೆಯಿಂದ ಕೆಆರ್​ಎಸ್​ ಡ್ಯಾಂಗೆ ಹಾನಿಯಾಗುವುದಿಲ್ಲವೇ ಎಂಬ ಪ್ರಶ್ನೆಗೆ, ಆ ಸುದ್ದೀನೇ ನನಗೆ ಗೊತ್ತಿಲಪ್ಪ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img