Friday, July 30, 2021
Homeಜಿಲ್ಲೆಬೆಂಗಳೂರುಪೊಲೀಸರ ದಾಳಿಯಲ್ಲಿ 50ಕ್ಕೂ ಹೆಚ್ಚು ರೌಡಿಗಳು ಮಿಸ್ಸಿಂಗ್!

ಇದೀಗ ಬಂದ ಸುದ್ದಿ

ಪೊಲೀಸರ ದಾಳಿಯಲ್ಲಿ 50ಕ್ಕೂ ಹೆಚ್ಚು ರೌಡಿಗಳು ಮಿಸ್ಸಿಂಗ್!

ಬೆಂಗಳೂರು: ಅನ್​ಲಾಕ್ ಬಳಿಕ ರಾಜಧಾನಿಯಲ್ಲಿ ರೌಡಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ನಗರ 8 ವಿಭಾಗಗಳಲ್ಲಿ ನಿನ್ನೆ ಬೆಳ್ಳಂಬೆಳ್ಳಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ನಗರ ಪೊಲೀಸರು ಸಾವಿರಾರು ರೌಡಿಶೀಟರ್​ಗಳನ್ನು ವಶಕ್ಕೆ ಪಡೆದುಕೊಂಡು ಮನೆಯಲ್ಲಿದ್ದ ಮಾರಕಾಸ್ತ್ರಗಳು ಹಾಗೂ ಗಾಂಜಾ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದರು.

ಈ ದಾಳಿಯಲ್ಲಿ ಪ್ರಮುಖ ರೌಡಿಶೀಟರ್ಗಳೇ ನಾಪತ್ತೆಯಾಗಿದ್ದಾರೆ. ನಿನ್ನೆ 2,144 ರೌಡಿ ಮನೆಗಳ ಮೇಲೆ ದಾಳಿ ಮಾಡಿದ್ದ ಪೊಲೀಸರು ದಾಳಿ ವೇಳೆ 1,548 ರೌಡಿಗಳನ್ನು ವಶಕ್ಕೆ ಪಡೆದುಕೊಂಡು‌ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಈ ಪೈಕಿ ವಿಚಾರಣೆ ಬಳಿಕ 561 ರೌಡಿಗಳ ವಿರುದ್ದ ಕೇಸ್ ದಾಖಲು ಮಾಡಲಾಗಿತ್ತು. ಇಷ್ಟೆಲ್ಲ ಆದರೂ ದಾಳಿಯಲ್ಲಿ ಪಾತಕಲೋಕದ ಪ್ರಮುಖ ರೌಡಿಗಳೇ ಪೊಲೀಸರೇ ಚಳ್ಳೆಹಣ್ಣು ತಿನ್ನಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img