Friday, July 30, 2021
Homeಜಿಲ್ಲೆಮೈಸೂರು"ಸಂಸದೆ ಸುಮಲತಾಗೆ ಬಿರುಕು-ದುರಸ್ತಿ ಪದದ ವ್ಯತ್ಯಾಸವೇ ಗೊತ್ತಿಲ್ಲ"

ಇದೀಗ ಬಂದ ಸುದ್ದಿ

“ಸಂಸದೆ ಸುಮಲತಾಗೆ ಬಿರುಕು-ದುರಸ್ತಿ ಪದದ ವ್ಯತ್ಯಾಸವೇ ಗೊತ್ತಿಲ್ಲ”

ಮೈಸೂರು : ಸಂಸದೆ ಸುಮಲತಾ ವರ್ಸಸ್ ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ವಾಕ್ ಸಮರ ಮುಂದುವರೆದಿದೆ. ಇದರ ಮಧ್ಯೆಯೇ ಸಂಸದೆ ಸಮಲತಾಗೆ ಬಿರುಕು ಹಾಗೂ ದುರಸ್ಥಿ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ. ಇದಕ್ಕೆ ಇರಬೇಕು ಕೆ ಆರ್ ಎಸ್ ಡ್ಯಾಂ ನಲ್ಲಿ ಬಿರುಕು ಬಿಟ್ಟಿದೆ ಎಂಬುದಾಗಿ ಹೇಳಿದ್ದಾರೆ ಎಂದು ಶಾಸಕ ಜಿಟಿ ದೇವೇಗೌಡ ವ್ಯಂಗ್ಯ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಅವರು, ಕೆ ಆರ್ ಎಸ್ ಡ್ಯಾಂ ಬಗ್ಗೆ ಎಲ್ಲರಿಗೂ ಕಾಳಜಿ ಇದೆ. ಡ್ಯಾಂ ನಲ್ಲಿ ಯಾವುದೇ ಬಿರುಕು ಬಿಟ್ಟಿಲ್ಲ ಎಂಬುದಾಗಿ ಸರ್ಕಾರವೇ ಸ್ಪಷ್ಟಪಡಿಸಿದೆ. ಹೀಗಿದ್ದೂ ಮೊದಲ ಬಾರಿ ಸಂಸದರಾಗಿರುವ ಸುಮಲತಾ, ಪದ ಪ್ರಯೋಗ ಗೊತ್ತಿಲ್ಲದೇ ಏನ್ ಏನೋ ಹೇಳುತ್ತಿದ್ದಾರೆ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img