Friday, July 30, 2021
Homeಜಿಲ್ಲೆಶಿವಮೊಗ್ಗಜೋಗದ ಸಿರಿ ಹೆಚ್ಚಿಸಿದ ಮುಂಗಾರು ಮಳೆ

ಇದೀಗ ಬಂದ ಸುದ್ದಿ

ಜೋಗದ ಸಿರಿ ಹೆಚ್ಚಿಸಿದ ಮುಂಗಾರು ಮಳೆ

ಶಿವಮೊಗ್ಗ: ಮಳೆಗಾಲ ಬಂದ್ರೆ ಸಾಕು ಜಗತ್ಪ್ರಸಿದ್ಧ ಜೋಗ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಲಗ್ಗೆ ಇಡುತ್ತದೆ. ಈ ಬಾರಿ ಮುಂಗಾರು ಮಳೆ ಪ್ರಾರಂಭದಲ್ಲಿ ಲಾಕ್​ಡೌನ್ ಇದ್ದ ಕಾರಣ ಪ್ರವಾಸಿಗರು ಬರಲಾಗಲಿಲ್ಲ. ಆದ್ರೆ ಅನ್​ಲಾಕ್​ ಆಗಿದ್ದೇ ತಡ ಜೋಗದತ್ತ ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

ಜೋಗ ಜಲಪಾತದ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜೋಗ ಜಲಪಾತ ಮೈದುಂಬಲಾರಂಭಿಸಿದೆ. ಹೀಗಾಗಿ ನಿನ್ನೆಯಿಂದ ವೀಕೆಂಡ್‌ ಪ್ರವಾಸಿಗರು ಜೋಗದತ್ತ ಮುಖ ಮಾಡಿದ್ದಾರೆ. ನಿನ್ನೆ ಜೋಗ ಜಲಪಾತಕ್ಕೆ ಸುಮಾರು 4 ಸಾವಿರಷ್ಟು ಪ್ರವಾಸಿಗರು ಆಗಮಿಸಿದ್ದಾರೆ. ಇಂದು 1 ಲಕ್ಷದಷ್ಟು ಜನ ಆಗಮಿಸುವ ನಿರೀಕ್ಷೆ ಇದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img