Thursday, July 29, 2021
Homeಸುದ್ದಿ ಜಾಲಹರ್ಲೀನ್‌​ ಡಿಯೋಲ್ ಆಟಗಾರ್ತಿ ಪ್ರತಿಭೆಗೆ ಮೋದಿ ಮೆಚ್ಚುಗೆ

ಇದೀಗ ಬಂದ ಸುದ್ದಿ

ಹರ್ಲೀನ್‌​ ಡಿಯೋಲ್ ಆಟಗಾರ್ತಿ ಪ್ರತಿಭೆಗೆ ಮೋದಿ ಮೆಚ್ಚುಗೆ

ಹೈದರಾಬಾದ್: ಇಂಗ್ಲೆಂಡ್ ವನಿತೆಯರ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಆಲ್​ರೌಂಡರ್​ ಹರ್ಲೀನ್ ಡಿಯೋಲ್ ಬೌಂಡರಿ ಲೈನ್​ ಬಳಿ ಹಿಡಿದ ಅದ್ಭುತ ಕ್ಯಾಚ್‌ಗೆ ಇದೀಗ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾರ್ಥಾಂಪ್ಟನ್‌ನ ಕೌಂಟಿ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್​ ತಂಡದ ವಿಕೆಟ್ ಕೀಪರ್ ಆಮಿ ಜೋನ್ಸ್ ಅವರು ಶಿಖಾ ಪಾಂಡೆ ಎಸೆದ 18 ಓವರ್‌ನ 5ನೇ ಎಸೆತವನ್ನು ಲಾಂಗ್​ ಆಫ್​ನತ್ತ ಬಾರಿಸಿದ್ದರು. ಹರ್ಲೀನ್ ಡಿಯೋಲ್ ಬೌಂಡರಿ ಲೈನ್​ ಬಳಿ ಚೆಂಡನ್ನು ಹಿಡಿದರಾದರೂ ವೇಗವಾಗಿ ಓಡಿದ್ದರಿಂದ ನಿಯಂತ್ರಣ ಕಳೆದುಕೊಂಡಿದ್ದರು. ಆದರೆ ಚೆಂಡನ್ನು ಮೇಲಕ್ಕೆಸೆದು ಮತ್ತೆ ಬೌಂಡರಿ ಹೊರಗಿನಿಂದ ಡೈವ್​ ಮಾಡಿ ಕ್ಯಾಚ್​ ಪಡೆದುಕೊಂಡಿದ್ದರು.

ಈ ಅದ್ಭುತ ಕ್ಯಾಚ್​ ಪ್ರಧಾನಿ ನರೇಂದ್ರ ಮೋದಿಯವರ ಮನವನ್ನೂ ಗೆದ್ದಿದೆ. ಟ್ವಿಟರ್‌ ಮೂಲಕ ಹರ್ಲೀನ್‌ ಅವರಿಗೆ ಅವರು ಅಭಿನಂದಿಸಿದ್ದು, ‘ಅದ್ಭುತ! ವೆಲ್‌ಡನ್‌ ಹರ್ಲೀನ್‌’ ಎಂದು ಬರೆದುಕೊಂಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img